ADVERTISEMENT

ಕಡಿಮೆ ಗುಣಮಟ್ಟದ ಸರಕು ಆಮದು ತಪ್ಪಿಸಲು ಕ್ರಮ: ಸಂಜೀವ್‌

ಪಿಟಿಐ
Published 5 ಮಾರ್ಚ್ 2023, 19:31 IST
Last Updated 5 ಮಾರ್ಚ್ 2023, 19:31 IST

ನವದೆಹಲಿ: ಕೇಂದ್ರ ಸರ್ಕಾರವು ಎಲೆಕ್ಟ್ರಿಕಲ್‌ ಸಾಧನಗಳು, ಅಲ್ಯುಮಿನಿಯಂ, ತಾಮ್ರದ ಉತ್ಪನ್ನಗಳ ಗುಣಮಟ್ಟ ನಿಯಂತ್ರಣಕ್ಕೆ ಸಂಬಂಧಿಸಿದ 58 ಆದೇಶಗಳನ್ನು ಆರು ತಿಂಗಳಿನಲ್ಲಿ ನೀಡಲಿದೆ ಎಂದು ಕೈಗಾರಿಕೆ ಉತ್ತೇಜನ ಮತ್ತು ಆಂತರಿಕ ವ್ಯಾಪಾರ ಇಲಾಖೆಯ ಜಂಟಿ ಕಾರ್ಯದರ್ಶಿ ಸಂಜೀವ್‌ ಹೇಳಿದ್ದಾರೆ.

ಕಡಿಮೆ ಗುಣಮಟ್ಟದ ಸರಕುಗಳ ಆಮದು ತಡೆಯುವ ಉದ್ದೇಶದಿಂದ ಈ ಕ್ರಮ ಎಂದು ತಿಳಿಸಿದ್ದಾರೆ. ಈ ಆದೇಶಗಳ ಅಡಿಯಲ್ಲಿ315 ಉತ್ಪನ್ನಗಳು ಬರಲಿವೆ. ಬಿಐಎಸ್‌ ಮಾರ್ಕ್‌ ಇಲ್ಲದೇ ಈ ಉತ್ಪನ್ನಗಳ ತಯಾರಿಕೆ, ಮಾರಾಟ/ವ್ಯಾಪಾರ, ಆಮದು ಮತ್ತು ದಾಸ್ತಾನು ಮಾಡುವಂತೆ ಇಲ್ಲ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT