ADVERTISEMENT

ಸೀವೀಡ್‌: ಸಮುದ್ರ ಕಳೆ ಆಮದಿಗೆ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ ಸರ್ಕಾರ

seaweed

ಪಿಟಿಐ
Published 25 ಅಕ್ಟೋಬರ್ 2024, 13:35 IST
Last Updated 25 ಅಕ್ಟೋಬರ್ 2024, 13:35 IST
ಸೀವೀಡ್‌
ಸೀವೀಡ್‌   

ನವದೆಹಲಿ: ಸೀವೀಡ್‌ ಅಥವಾ ಸಮುದ್ರ ಕಳೆಯ ಆಮದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಶುಕ್ರವಾರ ಮಾರ್ಗಸೂಚಿ ಪ್ರಕಟಿಸಿದೆ.

ದೇಶೀಯ ಮಟ್ಟದಲ್ಲಿ ಸೀವೀಡ್‌ ಬೆಳೆಯುವಿಕೆ ಕಡಿಮೆಯಾಗಿದೆ. ಹಾಗಾಗಿ, ದೇಶದ ಕರಾವಳಿ ‍ಪ್ರದೇಶದ ಆರ್ಥಿಕತೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಕೇಂದ್ರ ಮೀನುಗಾರಿಕೆ ಸಚಿವಾಲಯ ತಿಳಿಸಿದೆ.

ಆಮದು ಮಾಡಿಕೊಳ್ಳಲು ರಾಷ್ಟ್ರಮಟ್ಟದ ಸಮಿತಿಯ ಅನುಮತಿ ಕಡ್ಡಾಯವಾಗಿದೆ ಎಂದು ಹೇಳಿದೆ.

ADVERTISEMENT

ಸೀವೀಡ್‌ ಎಂದರೆ ಸಮುದ್ರದಲ್ಲಿ ಬೆಳೆಯು ಕಳೆಯಲ್ಲ. ಇದೊಂದು ಪಾಚಿ ರೂಪದ ಗಿಡವಾಗಿದೆ. ಜೆಲ್ಲಿ ರೂಪದಲ್ಲೂ ಇರುತ್ತದೆ. ಸಮುದ್ರದ ಉಪ್ಪು ನೀರಿನಲ್ಲಿ ಮತ್ತು ಪ್ರಖರವಾದ ಸೂರ್ಯನ ಬೆಳಕು ಇರುವಲ್ಲಿ ಇದು ಬೆಳೆಯುತ್ತದೆ.

ಸೀವೀಡ್‌ ಮೀನುಗಳ ಆಹಾರವಾಗಿದೆ. ಚೀನಾ, ಜಪಾನ್‌, ಕೊರಿಯಾದಲ್ಲಿ ಇದನ್ನು ವಾಣಿಜ್ಯ ಬೆಳೆ ಬೆಳೆಯಲಾಗುತ್ತದೆ. ತಮಿಳುನಾಡು, ಕೇರಳ, ಗುಜರಾತ್‌ನ ಕಡಲ ತೀರಗಳಲ್ಲಿ ಇದನ್ನು ಬೆಳೆಯಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.