ADVERTISEMENT

ಜಮೀನು ಮಾಲೀಕತ್ವಕ್ಕೆ ಬ್ಲಾಕ್‌ಚೈನ್‌ ನೆರವು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2023, 5:04 IST
Last Updated 1 ಏಪ್ರಿಲ್ 2023, 5:04 IST

ಬೆಂಗಳೂರು: ಕ್ರಿಪ್ಟೊಕರೆನ್ಸಿಗಳ ವಹಿವಾಟಿನಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಬ್ಲಾಕ್‌ಚೈನ್‌ ತಂತ್ರಜ್ಞಾನವನ್ನು ಬೆಂಗಳೂರಿನಲ್ಲಿ ಕೃಷಿ ಆಸ್ತಿಯ ಮಾಲೀಕತ್ವಕ್ಕೂ ಅನ್ವಯಿಸಲು ತಂತ್ರಜ್ಞಾನ ಕಂಪನಿಯೊಂದು ಮುಂದಾಗಿದೆ.

ಆಸ್ತಿ ತಂತ್ರಜ್ಞಾನ ವಲಯದ ನವೋದ್ಯಮ ‘ಗ್ರೀನ್‌ಲೇಕ್ಸ್‌’ ಕಂಪನಿಯು ತಾನು ಅಭಿವೃದ್ಧಿಪಡಿಸುತ್ತಿರುವ ಕೃಷಿ ಜಮೀನು ಯೋಜನೆಯಲ್ಲಿ, ಜಮೀನಿನ ಮಾಲೀಕತ್ವಕ್ಕೆ ಬ್ಲಾಕ್‌ಚೈನ್‌ ತಂತ್ರಜ್ಞಾನವನ್ನು ಅನ್ವಯ ಮಾಡುತ್ತಿದೆ.

ಬ್ಲಾಕ್‌ಚೈನ್‌ ತಂತ್ರಜ್ಞಾನದ ನೆರವಿನಿಂದಾಗಿ ದಶಕಗಳವರೆಗೆ ಜಮೀನಿನ ಮಾಲೀಕತ್ವದ ದಾಖಲೆಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಜಮೀನಿನಲ್ಲಿ ಬೆಳೆಯುವ ಕೃಷಿ ಉತ್ಪನ್ನಗಳ ಮೇಲೆ ನಿಗಾ ಇರಿಸಲು ಕೂಡ ಸಾಧ್ಯವಾಗುತ್ತದೆ ಎಂದು ಕಂಪನಿ ಹೇಳಿದೆ.

ADVERTISEMENT

ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಬಳಸಿ, ಜಮೀನಿನ ಮೇಲೆ ನಿಗಾ ಇರಿಸುವ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಈ ಆ್ಯಪ್‌ ಇಸ್ರೊದ ಸ್ಯಾಟ್‌2ಫಾರ್ಮ್‌ ಉಪಗ್ರಹದಿಂದಲೂ ಮಾಹಿತಿ ಪಡೆದುಕೊಳ್ಳುತ್ತದೆ. ಜಮೀನಿನ ಮಾಲೀಕರು ತಮ್ಮ ಜಮೀನಲ್ಲಿ ನಡೆಯುವ ಯಾವುದೇ ನಿರ್ಮಾಣ ಚಟುವಟಿಕೆಗಳ ಮೇಲೆ ನಿಗಾ ಇರಿಸಬಹುದು ಎಂದು ಕಂಪನಿಯ ಪ್ರಕಟಣೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.