ಬೆಂಗಳೂರು: ಜಿಆರ್‌ಟಿ ಜ್ಯುವೆಲರ್ಸ್ ಪುರುಷರಿಗಾಗಿ ಬ್ರೇಸ್ ಲೈಟ್, ಉಂಗುರ ಮತ್ತು ಕಂಠಹಾರದ ಹೊಸ ಸಂಗ್ರಹವನ್ನು ಪರಿಚಯಿಸಿದೆ.
ಈ ಸಂಗ್ರಹವು ಗುಣಮಟ್ಟದಿಂದ ಕೂಡಿದ್ದು ಉತ್ತಮ ಶೈಲಿಯನ್ನು ಒಳಗೊಂಡಿದೆ. ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಅವರು, ಪುರುಷರ ಕಲೆಕ್ಷನ್ಸ್‌ನ ಪ್ರಚಾರದ ರಾಯಭಾರಿಯಾಗಿದ್ದಾರೆ.
‘ಪುರುಷರ ಸಂಗ್ರಹವು ಸೊಗಸಾದ ಬ್ರೇಸ್ ಲೈಟ್‌ಗಳು, ಕಂಠಹಾರಗಳು, ದಪ್ಪ ಕಡಗಗಳು ಮತ್ತು ಉಂಗುರವನ್ನು ಒಳಗೊಂಡಿದೆ’ ಎಂದು ಜಿಆರ್‌ಟಿ ಜ್ಯುವೆಲರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಜಿ.ಆರ್. ಅನಂತ ಪದ್ಮನಾಭನ್ ಹೇಳಿದ್ದಾರೆ.
ಔಪಚಾರಿಕ, ಸಾಂಪ್ರದಾಯಕ ಹೀಗೆ ಎಲ್ಲಾ ಸಂದರ್ಭಕ್ಕೂ ಅನ್ವಯ ಆಗುವಂತಹ ಸೂಕ್ತ ಆಭರಣಗಳು ನಮ್ಮ ಮಳಿಗೆಗಳಲ್ಲಿ ಲಭ್ಯವಿವೆ ಎಂದು ಜ್ಯುವೆಲರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಜಿ.ಆರ್. ರಾಧಾಕೃಷ್ಣನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.