ನವದೆಹಲಿ: ಕಾಕಂಬಿ ಮೇಲಿನ ತೆರಿಗೆ ಪ್ರಮಾಣ ತಗ್ಗಿಸುವುದು, ಪ್ಯಾಕ್ ಮಾಡಿರುವ ಸಿರಿಧಾನ್ಯಗಳ ಹಿಟ್ಟನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದು ಸೇರಿದಂತೆ ಹಲವು ನಿರ್ಧಾರಗಳನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯು ಶನಿವಾರ ತೆಗೆದುಕೊಂಡಿದೆ.
ಕಾಕಂಬಿ ಮೇಲಿನ ಜಿಎಸ್‌ಟಿ ಪ್ರಮಾಣ ಕಡಿಮೆ ಮಾಡುವುದರಿಂದ ಕಾರ್ಖಾನೆಗಳ ನಗದು ಲಭ್ಯತೆ ಹೆಚ್ಚಾಗಲಿದ್ದು, ಕಬ್ಬು ಬೆಳೆಗಾರರಿಗೆ ಬಾಕಿ ಮೊತ್ತವನ್ನು ತ್ವರಿತವಾಗಿ ಪಾವತಿಸಲು ನೆರವಾಗಲಿದೆ. ಜಾನುವಾರುಗಳಿಗೆ ಮೇವು ತಯಾರಿಕಾ ವೆಚ್ಚವೂ ಕಡಿಮೆ ಆಗಲಿದೆ ಎಂದು ತಿಳಿಸಿದೆ.
ಶೇ 70ರಷ್ಟು ಸಿರಿಧಾನ್ಯವನ್ನು ಒಳಗೊಂಡಿರುವ ಹಿಟ್ಟಿಗೆ ಜಿಎಸ್‌ಟಿ
* ಪ್ಯಾಕ್ ಮತ್ತು ಲೇಬಲ್ ಮಾಡಿದ್ದರೆ– 5%
* ಪ್ಯಾಕ್ ಮತ್ತು ಲೇಬಲ್ ಇಲ್ಲದೇ ಇದ್ದರೆ –0%
* ಕಾಕಂಬಿ ಮೇಲಿನ ಜಿಎಸ್‌ಟಿ ಶೇ 28ರಿಂದ ಶೇ 5ಕ್ಕೆ ಇಳಿಕೆ
* ಜನ ಬಳಕೆಯ ಮದ್ಯ ತಯಾರಿಸಲು ಬಳಸುವ ಎಕ್ಸ್ಟ್ರಾ ನ್ಯೂಟ್ರಲ್ ಅಲ್ಕೋಹಾಲ್ (ಇಎನ್‌ಎ) ಜಿಎಸ್‌ಟಿ ವ್ಯಾಪ್ತಿಯಿಂದ ಹೊರಕ್ಕೆ. ಆದರೆ ಕೈಗಾರಿಕೆಗಳಲ್ಲಿ ಬಳಸುವ ಇಎನ್ಎಗೆ ಶೇ 18ರಷ್ಟು ಜಿಎಸ್‌ಟಿ ಇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.