ನವದೆಹಲಿ: ಹೊಸ ವರ್ಷದಿಂದ ಜಾರಿಗೆ ಬರುವಂತೆ ಜಿಎಸ್‌ಟಿ ಮಂಡಳಿ 23 ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ ದರದಲ್ಲಿ ಇಳಿಕೆ ಮಾಡಿದೆ.
ಇಲ್ಲಿ ಶನಿವಾರ ನಡೆದ ಜಿಎಸ್‌ಟಿ ಮಂಡಳಿಯ 31ನೇ ಸಭೆಯಲ್ಲಿ 17 ಸರಕುಗಳು ಮತ್ತು 6 ಸೇವೆಗಳ ಮೇಲಿನ ತೆರಿಗೆ ದರಗಳನ್ನು ಇಳಿಕೆ ಮಾಡಲು ಜಿಎಸ್‌ಟಿ ಮಂಡಳಿ ಒಪ್ಪಿಗೆ ನೀಡಿತು.
‘ತೆರಿಗೆ ಕಡಿತದಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ₹ 5,500 ಕೋಟಿ ಹೊರೆಯಾಗುವ ಅಂದಾಜು ಮಾಡಲಾಗಿದೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ಮುಖ್ಯವಾಗಿ ಸಿನಿಮಾ ಟಿಕೆಟ್, ಟಿವಿ ಪರದೆ, ಕಂಪ್ಯೂಟರ್ ಮಾನಿಟರ್ ಮತ್ತು ಪವರ್ ಬ್ಯಾಂಕ್ ಒಳಗೊಂಡು ಇನ್ನೂ ಹಲವು ಸರಕುಗಳ ಮೇಲಿನ ತೆರಿಗೆ ದರದಲ್ಲಿ ಇಳಿಕೆ ಆಗಿದೆ.
ಆದರೆ, ವಾಹನ ಬಿಡಿಭಾಗ ಮತ್ತು ಸಿಮೆಂಟ್ ಮೇಲಿನ ತೆರಿಗೆ ದರದಲ್ಲಿ ಯಾವುದೇ ಕಡಿತ ಮಾಡಿಲ್ಲ. ಶೇ 28 ಗರಿಷ್ಠ ತೆರಿಗೆಯಲ್ಲಿಯೇ ಉಳಿಸಿಕೊಳ್ಳಲಾಗಿದೆ. ಸಿಮೆಂಟ್ ಮೇಲಿನ ತೆರಿಗೆ ದರ ತಗ್ಗಿಸಿದ್ದರೆ, ರಿಯಲ್ ಎಸ್ಟೇಟ್ ಉದ್ಯಮ ಅದರಲ್ಲಿಯೂ ಕೈಗೆಟುಕುವ ದರದಲ್ಲಿ ಮನೆಗಳನ್ನು ನಿರ್ಮಾಣ ಮಾಡುವ ವಲಯಕ್ಕೆ ಹೆಚ್ಚಿನ ಉತ್ತೇಜನ ಸಿಗುತ್ತಿತ್ತು. ಆದರೆ, ಹಾಗಾಗಲಿಲ್ಲ.
ಹೆಚ್ಚುವರಿ ಸೆಸ್: ಪ್ರವಾಹದಿಂದ ನಷ್ಟ ಅನುಭವಿಸಿರುವ ರಾಜಗಳಿಗೆ ನೆರವಾಗುವ ಉದ್ದೇಶದಿಂದ ಕೆಲವು ಸರಕುಗಳಿಗೆ ಹೆಚ್ಚುವರಿ ಸೆಸ್ ವಿಧಿಸುವ ಪ್ರಸ್ತಾವವನ್ನು ಹಣಕಾಸು ಸಚಿವಾಲಯ ಮುಂದಿಟ್ಟಿದೆ. ಇದಕ್ಕೆ ಸಂಬಂಧಿಸಿದ ವರದಿಯನ್ನು ಸಚಿವರ ತಂಡ ಅಂತಿಮಗೊಳಿಸುತ್ತಿದೆ ಎಂದು ಮಂಡಳಿ ತಿಳಿಸಿದೆ.
ಬಾಲಿವುಡ್ ಶ್ಲಾಘನೆ
ಟಿಕೆಟ್‌ಗಳ ಮೇಲಿನ ಜಿಎಸ್‌ಟಿ ತಗ್ಗಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಬಾಲಿವುಡ್‌ನಅಕ್ಷಯ್ ಕುಮಾರ್, ಅಜಯ್ ದೇವ್‌ಗನ್, ಅಮೀರ್ ಖಾನ್, ಕರಣ್ ಜೋಹರ್ ಅವರನ್ನು ಒಳಗೊಂಡು ಇನ್ನೂ ಹಲವು ಪ್ರಮುಖರು ಶ್ಲಾಘಿಸಿದ್ದಾರೆ.
‘ಜಿಎಸ್‌ಟಿ ತಗ್ಗಿಸಿರುವುದರಿಂದ ಟಿಕೆಟ್ ದರಗಳಲ್ಲಿ ಇಳಿಕೆಯಾಗಲಿದ್ದು, ಸಿನಿಮಾ ನೋಡುಗರ ಸಂಖ್ಯೆಯಲ್ಲಿಯೂ ಏರಿಕೆಯಾಗಲಿದೆ’ ಎಂದುಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಅಧ್ಯಕ್ಷ ದೀಪಕ್ ಅಷೇರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.