ನವದೆಹಲಿ: ಜಿಎಸ್‌ಟಿ ಜಾಲತಾಣದಲ್ಲಿ ಇರುವ ತಾಂತ್ರಿಕ ದೋಷಗಳನ್ನು ಪರಿಹರಿಸಿ, ಸಶಕ್ತಗೊಳಿಸಲು ಜಿಎಸ್‌ಟಿ ಮಂಡಳಿಯು ಇನ್ಫೊಸಿಸ್‌ಗೆ ಜುಲೈವರೆಗೆ ಗಡುವು ನೀಡಿದೆ.
ರಿಟರ್ನ್ಸ್ ಸಲ್ಲಿಸುವಾಗ ಬಹಳಷ್ಟು ಸಮಸ್ಯೆ ಆಗುತ್ತಿದೆ ಎಂದು ತೆರಿಗೆದಾರರು ಹಣಕಾಸು ಸಚಿವಾಲಯಕ್ಕೆ ಪದೇ ಪದೇ ದೂರು ನೀಡುತ್ತಿದ್ದರು. ಹಾಗಾಗಿ ಸಚಿವಾಲಯವುಮಾರ್ಚ್ 5ರಂದು ಇನ್ಫೊಸಿಸ್‌ಗೆ ಪತ್ರ ಬರೆದಿತ್ತು. 2018ರ ಆರಂಭದಲ್ಲಿ ಕಂಡುಬಂದಿದ್ದ ತಾಂತ್ರಿಕ ಸಮಸ್ಯೆಗಳು ಇಂದಿಗೂ ಬಗೆಹರಿದಿಲ್ಲ.
ರಿಟರ್ನ್ಸ್ ಸಲ್ಲಿಕೆಯಲ್ಲಿನ ವೈಫಲ್ಯಗಳು ತಿಂಗಳಿನಿಂದ ತಿಂಗಳಿಗೆ ಹೆಚ್ಚಾಗುತ್ತಲೇ ಇವೆ. ಇದರಿಂದಾಗಿ ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಸಮಸ್ಯೆಯಾಗುತ್ತಿದೆ. ಎಲ್ಲಾ ರೀತಿಯ ಸಮಸ್ಯೆಗಳನ್ನು ಬಗೆಹರಿಸಿ, ಜಾಲತಾಣದ ಸಾಮರ್ಥ್ಯ ವೃದ್ಧಿಸುವಂತೆ ಸೂಚಿಸಲಾಗಿತ್ತು.
ತೆರಿಗೆ ಇಳಿಕೆ: ವಿಮಾನ ನಿರ್ವಹಣೆ, ದುರಸ್ತಿ (ಎಂಆರ್‌ಒ) ಸೇವೆಗಳ ಮೇಲಿನ ಜಿಎಸ್‌ಟಿ ದರವನ್ನು ಶೇ 18ರಿಂದ ಶೇ 15ಕ್ಕೆ ಇಳಿಕೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.