ADVERTISEMENT

ಮಾರ್ಚ್‌ನಲ್ಲಿ ₹1.78 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಏಪ್ರಿಲ್ 2024, 13:10 IST
Last Updated 1 ಏಪ್ರಿಲ್ 2024, 13:10 IST
<div class="paragraphs"><p>ಜಿಎಸ್‌ಟಿ </p></div>

ಜಿಎಸ್‌ಟಿ

   

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ 2023–24ನೇ ಹಣಕಾಸು ವರ್ಷ ಮಾರ್ಚ್‌ನಲ್ಲಿ ₹1.78 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಸೋಮವಾರ ತಿಳಿಸಿದೆ.

ಕಳೆದ ಆರ್ಥಿಕ ವರ್ಷದ ಸಂಗ್ರಹವಾಗಿದ್ದ ವರಮಾನಕ್ಕೆ ಹೋಲಿಸಿದರೆ ಶೇ 11.5ರಷ್ಟು ಏರಿಕೆಯಾಗಿದೆ. ಆದರೆ, ಪ್ರಸಕ್ತ ವರ್ಷದ ಜನವರಿಯಲ್ಲಿ ಸಂಗ್ರಹವಾಗಿದ್ದ ₹1.72 ಲಕ್ಷ ಕೋಟಿಗೆ ಹೋಲಿಸಿದರೆ ಏರಿಕೆ ಆಗಿದೆ. ದೇಶೀಯ ವಹಿವಾಟು ಜಿಎಸ್‌ಟಿ ಸಂಗ್ರಹದ ಮೇಲೆ ಪರಿಣಾಮ ಬೀರಿದೆ ಎಂದು ಸಚಿವಾಲಯವು ಹೇಳಿದೆ.

ADVERTISEMENT

2023–24ನೇ ಆರ್ಥಿಕ ವರ್ಷದಲ್ಲಿ ಫೆಬ್ರುವರಿವರೆಗೆ ಒಟ್ಟು ₹18.40 ಲಕ್ಷ ಕೋಟಿ ವರಮಾನ ಸಂಗ್ರಹವಾಗಿತ್ತು. 2022–23ನೇ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 11.7ರಷ್ಟು ಏರಿಕೆಯಾಗಿದೆ.

ಕಳೆದ ಹನ್ನೊಂದು ತಿಂಗಳಿನಲ್ಲಿ ಸರಾಸರಿ ಸಂಗ್ರಹವು ₹1.67 ಲಕ್ಷ ಕೋಟಿ ಆಗಿದೆ. ಕಳೆದ ಹಣಕಾಸು ವರ್ಷದಲ್ಲಿ ಸರಾಸರಿ ಸಂಗ್ರಹ ₹1.5 ಲಕ್ಷ ಕೋಟಿ ಇತ್ತು ಎಂದು ಸಚಿವಾಲಯವು ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.