ADVERTISEMENT

₹ 263 ಕೋಟಿ ತೆರಿಗೆ: ಯುನೈಟೆಡ್‌ ಬ್ರೀವರೀಸ್‌ಗೆ ನೋಟಿಸ್‌

ಪಿಟಿಐ
Published 6 ಏಪ್ರಿಲ್ 2024, 15:59 IST
Last Updated 6 ಏಪ್ರಿಲ್ 2024, 15:59 IST
   

ನವದೆಹಲಿ: ಬಿಯರ್ ತಯಾರಿಸುವ ಕಂಪನಿ ಯುನೈಟೆಡ್ ಬ್ರೀವರೀಸ್‌ ಲಿಮಿಟೆಡ್‌ಗೆ ತೆರಿಗೆ, ಬಡ್ಡಿ ಹಾಗೂ ದಂಡ ಸೇರಿ ಒಟ್ಟು ₹263 ಕೋಟಿ ಮೊತ್ತ ಪಾವತಿಸುವಂತೆ ಮಹಾರಾಷ್ಟ್ರದ ಸರಕು ಮತ್ತು ಸೇವಾ ಇಲಾಖೆಯು ನೋಟಿಸ್‌ ನೀಡಿದೆ.

2019–20ನೇ ಮೌಲ್ಯಮಾ‍‍ಪನ ವರ್ಷಕ್ಕೆ ಸಂಬಂಧಿಸಿದಂತೆ ಜಿಎಸ್‌ಟಿ ವಿಭಾಗದ ಉಪ ಆಯುಕ್ತರು ನೋಟಿಸ್‌ ನೀಡಿದ್ದಾರೆ ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ತೆಲಂಗಾಣ ರಾಜ್ಯ ಪಾನೀಯ ನಿಗಮ, ಕರ್ನಾಟಕ ರಾಜ್ಯ ಪಾನೀಯ ನಿಗಮ, ಆಂಧ್ರಪ್ರದೇಶ ರಾಜ್ಯ ಪಾನೀಯ ನಿಗಮಕ್ಕೆ ಕಂಪನಿಯಿಂದ ಸಲ್ಲಿಸಿರುವ ಡೆಬಿಟ್‌ ನೋಟ್‌ ದಾಖಲೆಗಳಿಗೆ ಸಂಬಂಧಿಸಿದಂತೆ ವಿಧಿಸಿರುವ ಶೇ 60ರಷ್ಟು ಕೇಂದ್ರ ಸೇವಾ ತೆರಿಗೆಯ ಮೊತ್ತ ಇದಾಗಿದೆ ಎಂದು ವಿವರಿಸಿದೆ.

ADVERTISEMENT

ಈ ಬಗ್ಗೆ ಸಕ್ಷಮ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಲಾಗುವುದು. ನೋಟಿಸ್‌ನಿಂದ ಕಂಪನಿಯ ಆರ್ಥಿಕ ಚಟುವಟಿಕೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.  ಎಂದು ತಿಳಿಸಿದೆ. 

2018–19ನೇ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿ ₹275 ಕೋಟಿ ತೆರಿಗೆ ಪಾವತಿಸುವಂತೆ ಇಲಾಖೆಯು ನೋಟಿಸ್‌ ನೀಡಿತ್ತು. ಇದರ ವಿರುದ್ಧವೂ ಮೇಲ್ಮನವಿ ಸಲ್ಲಿಸಲಾಗಿತ್ತು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.