ಗಾಂಧಿನಗರ: ದೀಪಾವಳಿ ಹಬ್ಬ ಹತ್ತಿರದಲ್ಲೇ ಇರುವಾಗ ಗುಜರಾತ್ ಸರ್ಕಾರ ಇಂಧನದ ತೆರಿಗೆ ಕಡಿತ ಮತ್ತು ಅಡುಗೆ ಸಿಲಿಂಡರ್ ಉಚಿತ ಕೊಡುಗೆಗಳನ್ನು ಸೋಮವಾರ ಘೋಷಿಸಿದೆ.
ಸಿಎನ್‌ಜಿ ಮತ್ತು ಪಿಎನ್‌ಜಿ ಮೇಲಿನವ್ಯಾಟ್ (ಮೌಲ್ಯವರ್ಧಿತ ತೆರಿಗೆ) ತೆರಿಗೆಯಲ್ಲಿ ಶೇ 10 ಕಡಿತ ಹಾಗೂ ಕೇಂದ್ರದ ಉಜ್ವಲ ಯೋಜನೆಯ ಫಲಾನುಭವಿಗಳಾದ ರಾಜ್ಯದ 38 ಲಕ್ಷ ಜನರಿಗೆ ಪ್ರತಿ ವರ್ಷ ಎರಡು ಅಡುಗೆ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುವುದಾಗಿ ಪ್ರಕಟಿಸಿದೆ.
ವ್ಯಾಟ್ ಕಡಿತಗೊಳಿಸಿರುವುದರಿಂದ ಸಿಎನ್‌ಜಿ, ಪಿಎನ್‌ಜಿ ಬಳಸುತ್ತಿರುವ ಆಟೊ ಚಾಲಕರು, ಗೃಹ ಕೈಗಾರಿಕೆ ನಡೆಸುವ ಗೃಹಿಣಿಯರಿಗೆ ಅನುಕೂಲವಾಗಲಿದೆ ಎಂದು ರಾಜ್ಯ ಸಚಿವ ಜಿತು ವಾಘಾನಿ ಹೇಳಿದ್ದಾರೆ.
ಗುಜರಾತ್ ವಿಧಾನಸಭೆ ಚುನಾವಣೆ ಕೆಲವೇ ದಿನಗಳಲ್ಲಿ ಘೋಷಣೆಯಾಗುವ ಹಿನ್ನೆಲೆಯಲ್ಲಿ ಸರ್ಕಾರದಿಂದ ‘ಉಚಿತ ಕೊಡುಗೆ’ಗಳು ಘೋಷಣೆಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.