ADVERTISEMENT

ಎಚ್‌ಎಎಲ್‌: ಹಣಕಾಸು ವಿಭಾಗದ ನಿರ್ದೇಶಕರಾಗಿ ಬರೇಣ್ಯ ಸೇನಾಪತಿ ನೇಮಕ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 14:40 IST
Last Updated 23 ಅಕ್ಟೋಬರ್ 2024, 14:40 IST
ಬರೇಣ್ಯ ಸೇನಾಪತಿ
ಬರೇಣ್ಯ ಸೇನಾಪತಿ   

ಬೆಂಗಳೂರು: ಹಿಂದುಸ್ತಾನ್ ಏರೋನಾಟಿಕ್ಸ್‌ ಲಿಮಿಟೆಡ್‌ನ (ಎಚ್‌ಎಎಲ್‌) ಹಣಕಾಸು ವಿಭಾಗದ ನಿರ್ದೇಶಕರಾಗಿ ಬರೇಣ್ಯ ಸೇನಾಪತಿ ಅವರು ನೇಮಕವಾಗಿದ್ದಾರೆ.

1995ರಲ್ಲಿ ಎಚ್‌ಎಎಲ್‌ಗೆ ಸೇರಿದ ಅವರು 29 ವರ್ಷದ ಸೇವಾನುಭವ ಹೊಂದಿದ್ದಾರೆ. ವಿಭಾಗೀಯ ಮಟ್ಟ ಮತ್ತು ಕಾರ್ಪೊರೇಟ್ ಫೈನಾನ್ಸ್‌ ಸೇರಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದು ಕಂಪನಿ ತಿಳಿಸಿದೆ.

ಪ್ರಸ್ತುತ ನಿರ್ದೇಶಕ ಹುದ್ದೆಗೆ ನೇಮಕಗೊಳ್ಳುವ ಮೊದಲು ಅವರು, ಕಾರ್ಪೊರೇಟ್‌ ಕಚೇರಿಯ ಹಣಕಾಸು ವಿಭಾಗದ ಕಾರ್ಯ ನಿರ್ವಾಹಕ ನಿರ್ದೇಶಕ ಮತ್ತು ಎಚ್‌ಎಎಲ್‌ನ ಹಣಕಾಸು ಮತ್ತು ಲೆಕ್ಕಪತ್ರ ಸಂಬಂಧಿತ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು. ಎಚ್‌ಎಎಲ್‌ಗೆ ‘ಮಹಾರತ್ನ’ ಸ್ಥಾನ ದೊರೆಯುವಲ್ಲಿ ಸಕ್ರಿಯ ಪಾತ್ರ ವಹಿಸಿದ್ದಾರೆ ಎಂದು ತಿಳಿಸಿದೆ.

ADVERTISEMENT

ಆರ್ಥಿಕ ಕ್ಷೇತ್ರದಲ್ಲಿ 31 ವರ್ಷ ಅನುಭವ ಹೊಂದಿರುವ ಸೇನಾಪತಿ ಅವರು, ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆಯ (ಐಸಿಎಐ) ಸದಸ್ಯ ಕೂಡ  ಆಗಿದ್ದಾರೆ.

Highlights - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.