ADVERTISEMENT

ಅನಿಲ್ ಅಂಬಾನಿ ಒಡೆತನದ ರಿಲಯನ್ಸ್‌ ಪವರ್‌ ಮೇಲಿನ ನಿಷೇಧಕ್ಕೆ ದೆಹಲಿ ಹೈಕೋರ್ಟ್ ತಡೆ

ಪಿಟಿಐ
Published 26 ನವೆಂಬರ್ 2024, 11:02 IST
Last Updated 26 ನವೆಂಬರ್ 2024, 11:02 IST
<div class="paragraphs"><p>ಅನಿಲ್‌ ಅಂಬಾನಿ</p></div>

ಅನಿಲ್‌ ಅಂಬಾನಿ

   

ನವದೆಹಲಿ: ಹರಾಜು ಪ್ರಕ್ರಿಯೆಯಲ್ಲಿ ಮೂರು ವರ್ಷ ಭಾಗಿಯಾಗದಂತೆ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಪವರ್‌ ಲಿಮಿಟೆಡ್‌ ಮೇಲೆ ನಿಷೇಧ ಹೇರುವ ಕುರಿತು ಭಾರತೀಯ ಸೌರ ಇಂಧನ ಕಾರ್ಪೊರೇಷನ್ (ಎಸ್‌ಇಸಿಐ) ಹೊರಡಿಸಿದ್ದ ನೋಟಿಸ್‌ಗೆ ದೆಹಲಿ ಹೈಕೋರ್ಟ್ ತಡೆ ಮಂಗಳವಾರ ನೀಡಿದೆ. 

ಬ್ಯಾಟರಿ ಸ್ಟೋರೇಜ್ ಟೆಂಡರ್ ಪಡೆಯಲು ನಕಲಿ ಬ್ಯಾಂಕ್ ಗ್ಯಾರಂಟಿ ನೀಡಿದ ಆರೋಪದಡಿ ರಿಲಯನ್ಸ್‌ ಪವರ್ ಲಿಮಿಟೆಡ್‌ ಮೇಲೆ ಎಸ್‌ಇಸಿಐ ಮೂರು ವರ್ಷಗಳ ನಿಷೇಧ ಹೇರಿತ್ತು. ಕಂಪನಿ ವಿರುದ್ಧ ಹೊರಡಿಸಲಾದ ಡೆಬರ್ಮೆಂಟ್‌ ನೋಟಿಸ್ ಹಾಗೂ ಸಾರ್ವಜನಿಕ ನೋಟಸ್‌ಗೆ ಹೈಕೋರ್ಟ್ ತಡೆ ನೀಡಿದೆ. ಷೇರು ಪೇಟೆಯಲ್ಲಿ ಮಹಾರಾಷ್ಟ್ರ ಎನರ್ಜಿ ಜೆನರೇಷನ್ ಲಿಮಿಟೆಡ್‌ ಎಂದು ನೋಂದಾಯಿಸಿರುವ ರಿಲಯನ್ಸ್‌ ನು ಬೆಸ್‌ ಲಿಮಿಟೆಡ್‌ ಹೊರತುಪಡಿಸಿ ಅದರ ಉಳಿದ ಸೋದರ ಸಂಸ್ಥೆಗಳ ವಿರುದ್ಧದ ನೋಟಿಸ್‌ಗೆ ತಡೆ ನೀಡಿದೆ.

ADVERTISEMENT

ಈ ಗುತ್ತಿಗೆ ಪಡೆಯಲು ರಿಲಾಯನ್ಸ್ ನು ಬೆಸ್‌ ಕಂಪನಿಯು ಫಿಲಿಪಿನ್ಸ್‌ನ ಮನಿಲಾ ನಗರದಲ್ಲಿರುವ ಫಸ್ಟ್‌ರ‍್ಯಾಂಡ್‌ ಬ್ಯಾಂಕ್‌ ಶಾಖೆ ನೀಡಿದ ಗ್ಯಾರಂಟಿ ನೀಡಿತ್ತು. ಆದರೆ ಈ ಕುರಿತು ತನಿಖೆ ನಡೆಸಿದ ಭಾರತದಲ್ಲಿರುವ ಬ್ಯಾಂಕ್‌ನ ಶಾಖೆಯು, ಅಂಥ ಯಾವುದೇ ಶಾಖೆ ಫಿಲಿಪಿನ್ಸ್‌ನಲ್ಲಿ ಇಲ್ಲ. ಎಸ್‌ಇಸಿಐಗೆ ಸಲ್ಲಿಸಿರುವ ದಾಖಲಾತಿ ನಕಲಿ ಎಂದು ತನ್ನ ವರದಿ ನೀಡಿತ್ತು.

ಇದನ್ನು ಆಧರಿಸಿ ರಿಲಯನ್ಸ್‌ ಪವರ್ ಹಾಗೂ ರಿಲಯನ್ಸ್‌ ನು ಬೆಸ್‌ ಕಂಪನಿಗಳು ಎಸ್ಇಸಿಐ ಟೆಂಡರ್‌ನಲ್ಲಿ ರಿಲಯನ್ಸ್‌ ಪವರ್ ಹಾಗೂ ರಿಲಾಯನ್ಸ್ ನು ಬೆಸ್‌ ಕಂಪನಿಗಳು ಮುಂದಿನ ಮೂರು ವರ್ಷಗಳ ಕಾಲ ಟೆಂಡರ್‌ನಲ್ಲಿ ಪಾಲ್ಗೊಳ್ಳದಂತೆ ನಿಷೇಧ ಹೇರಿತ್ತು. ಇದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ರಿಲಯನ್ಸ್‌ ಪವರ್‌ ಅರ್ಜಿ ಸಲ್ಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.