ನವದೆಹಲಿ: ಮಾರ್ಚ್ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಎಚ್‌ಸಿಎಲ್ ಟೆಕ್ನಾಲಜೀಸ್‌ನ ನಿವ್ವಳ ಲಾಭವು ಶೇಕಡ 10.85ರಷ್ಟು ಹೆಚ್ಚಳ ಆಗಿದ್ದು, ₹ 3,983 ಕೋಟಿಗೆ ತಲುಪಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕಂಪನಿಯು ₹ 3,599 ಕೋಟಿ ನಿವ್ವಳ ಲಾಭ ಗಳಿಸಿತ್ತು.
ಕಂಪನಿಯ ಕಾರ್ಯಾಚರಣೆ ವರಮಾನದಲ್ಲಿ ಶೇ 18ರಷ್ಟು ಹೆಚ್ಚಳ ದಾಖಲಾಗಿದ್ದು, ಕಂಪನಿಯು ₹ 26,606 ಕೋಟಿ ವರಮಾನ ಗಳಿಸಿದೆ. ಮಾರ್ಚ್ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಕಂಪನಿಯ ಲಾಭವು ಶೇ 10ರಷ್ಟು ಹೆಚ್ಚಾಗಿದ್ದು, ₹ 14,845 ಕೋಟಿಗೆ ತಲುಪಿದೆ. ಹಿಂದಿನ ಆರ್ಥಿಕ ವರ್ಷದಲ್ಲಿ ಕಂಪನಿಯು ₹ 13,499 ಕೋಟಿ ಲಾಭ ಗಳಿಸಿತ್ತು.
ಕಂಪನಿಯ ವಾರ್ಷಿಕ ಕಾರ್ಯಾಚರಣೆ ವರಮಾನವು ₹ 1 ಲಕ್ಷ ಕೋಟಿಯ ಗಡಿ ದಾಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.