ADVERTISEMENT

ಎಚ್‌ಸಿಎಲ್‌ ಟೆಕ್ ದೇಶದ ಅತ್ಯುತ್ತಮ ಕಂಪನಿ: ಟೈಮ್‌ ನಿಯತಕಾಲಿಕ

ಪಿಟಿಐ
Published 16 ಸೆಪ್ಟೆಂಬರ್ 2024, 16:01 IST
Last Updated 16 ಸೆಪ್ಟೆಂಬರ್ 2024, 16:01 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಅಮೆರಿಕದ ಜನಪ್ರಿಯ ನಿಯತಕಾಲಿಕ ಟೈಮ್ ಬಿಡುಗಡೆ ಮಾಡಿರುವ ‘ಜಗತ್ತಿನ ಅತ್ಯುತ್ತಮ ಕಂಪನಿಗಳು–2024ರ ಪಟ್ಟಿ’ಯಲ್ಲಿ ಭಾರತದಲ್ಲಿ ಕೇಂದ್ರ ಸ್ಥಾನ ಹೊಂದಿರುವ ಕಂಪನಿಗಳ ಪೈಕಿ, ದೇಶದ ಪ್ರಮುಖ ಐ.ಟಿ ಕಂಪನಿ ಎಚ್‌ಸಿಎಲ್‌ ಟೆಕ್ ಮೊದಲ ಸ್ಥಾನ ಪಡೆದಿದೆ.

ಕಂಪನಿಯು ವೃತ್ತಿಪರ ಸೇವೆಗಳ ವಿಭಾಗದಲ್ಲಿಯೂ ಜಾಗತಿಕ ಮಟ್ಟದಲ್ಲಿ 10ನೇ ಸ್ಥಾನ ಪಡೆದಿದೆ ಎಂದು ಪಟ್ಟಿಯಲ್ಲಿ ತಿಳಿಸಲಾಗಿದೆ.

ಜಗತ್ತಿನ ಅತ್ಯುತ್ತಮ ಕಂಪನಿಗಳ ಈ ಶ್ರೇಯಾಂಕವು, ಉದ್ಯೋಗಿಗಳ ತೃಪ್ತಿ, ವರಮಾನದ ಬೆಳವಣಿಗೆ ಮತ್ತು ಸುಸ್ಥಿರತೆಯ ಅಂಶಗಳ ಆಧಾರದ ಮೇಲೆ ಜಗತ್ತಿನಾದ್ಯಂತ ಉನ್ನತ ಕಾರ್ಯನಿರ್ವಹಣೆಯ ಕಂಪನಿಗಳನ್ನು ಗುರುತಿಸುತ್ತದೆ.

ADVERTISEMENT

2024–25ರ ಹಣಕಾಸು ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಕಂಪನಿ ₹4,257 ಕೋಟಿ ನಿವ್ವಳ ಲಾಭ ಗಳಿಸಿತ್ತು. 2023–24ರ ಇದೇ ಅವಧಿಗೆ ಹೋಲಿಸಿದರೆ ಲಾಭದಲ್ಲಿ ಶೇ 20ರಷ್ಟು ಹೆಚ್ಚಳವಾಗಿದೆ. ವರಮಾನವು ₹28,057 ಕೋಟಿಯಾಗಿದ್ದು, ಶೇ 6ರಷ್ಟು ಏರಿಕೆಯಾಗಿದೆ. ಪ್ರಸಕ್ತ ವರ್ಷದ ಜೂನ್‌ ಅಂತ್ಯದ ವೇಳೆಗೆ, ಕಂಪನಿಯು 60 ದೇಶಗಳಲ್ಲಿ 2.19 ಲಕ್ಷ ಉದ್ಯೋಗಿಗಳನ್ನು ಹೊಂದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.