ADVERTISEMENT

ಡಿಜಿಟಲ್ ಬ್ಯಾಂಕಿಂಗ್‌ನಲ್ಲಿ ದೋಷ ಒಪ್ಪಿಕೊಂಡ ಎಚ್‌ಡಿಎಫ್‌ಸಿ: ಸರಿಪಡಿಸುವ ಭರವಸೆ

ಪಿಟಿಐ
Published 30 ಮಾರ್ಚ್ 2021, 11:55 IST
Last Updated 30 ಮಾರ್ಚ್ 2021, 11:55 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೇಶದ ಖಾಸಗಿ ರಂಗದ ಪ್ರಮುಖ ಬ್ಯಾಂಕ್ ಎಚ್‌ಡಿಎಫ್‌ಸಿ ತನ್ನ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕೆಲವೊಂದು ಲೋಪದೋಷಗಳಿದ್ದು, ಶೀಘ್ರವೇ ಅದನ್ನು ಸರಿಪಡಿಸುವುದಾಗಿ ಹೇಳಿದೆ.

ಕೆಲವು ಗ್ರಾಹಕರಿಗೆ ನೆಟ್‌ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಆ್ಯಪ್‌ನಲ್ಲಿ ತೊಂದರೆ ಎದುರಾಗಿದೆ. ಶೀಘ್ರವೇ ಈ ಸಮಸ್ಯೆಯನ್ನು ಸರಿಪಡಿಸಲಾಗುವುದು, ಅಡಚಣೆಗಾಗಿ ವಿಷಾದಿಸುತ್ತೇವೆ, ದಯವಿಟ್ಟು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ, ಧನ್ಯವಾದ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ಟ್ವೀಟ್ ಮಾಡಿದೆ.

ಈ ಮೊದಲು ಕೂಡ ಬಳಕೆದಾರರಿಗೆ ಸಮಸ್ಯೆ ಕಾಣಿಸಿಕೊಂಡಿದ್ದು, ಆ್ಯಪ್ ಮತ್ತು ನೆಟ್‌ಬ್ಯಾಂಕಿಂಗ್‌ನಲ್ಲಿ ತೊಂದರೆಯಾಗಿತ್ತು. ಅದಕ್ಕಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ದಂಡ ವಿಧಿಸಿತ್ತು.

ADVERTISEMENT

ಅಲ್ಲದೆ, ಕಳೆದ ಡಿಸೆಂಬರ್‌ನಲ್ಲಿ ಹೊಸ ಕ್ರೆಡಿಟ್ ಕಾರ್ಡ್ ವಿತರಣೆ ಮತ್ತು ನೂತನ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ನೀಡುವುದಕ್ಕೆ ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಆರ್‌ಬಿಐ ತಾತ್ಕಾಲಿಕ ನಿರ್ಬಂಧ ಹೇರಿತ್ತು.

ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ದೋಷ ಇದ್ದುದ್ದರಿಂದ, 2018ರ ನವೆಂಬರ್ ಮತ್ತು 2019ರ ಡಿಸೆಂಬರ್‌ನಲ್ಲಿ ಆರ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ದಂಡ ವಿಧಿಸಿತ್ತು.

ಸೆಪ್ಟೆಂಬರ್ 2020ರಲ್ಲಿ ಎಚ್‌ಡಿಎಫ್‌ಸಿ 1.49 ಕೋಟಿ ಕ್ರೆಡಿಟ್ ಕಾರ್ಡ್ ಮತ್ತು 3.38 ಕೋಟಿ ಡೆಬಿಟ್ ಕಾರ್ಡ್ ಬಳಕೆದಾರರನ್ನು ಹೊಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.