ನವದೆಹಲಿ: ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್) 2014ರಿಂದ ಇಲ್ಲಿಯವರೆಗೆ 3.25 ಲಕ್ಷ ಯುವಜನರಿಗೆ ಕೌಶಲ ತರಬೇತಿ ನೀಡಲಾಗಿದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ಭಾನುವಾರ ತಿಳಿಸಿದೆ.
ವಿವಿಧ ರಾಜ್ಯಗಳು, ಐ.ಟಿ, ಐಟಿಇಎಸ್, ಚಿಲ್ಲರೆ, ಆರೋಗ್ಯ, ತಯಾರಿಕಾ, ಕೃಷಿ ಸೇರಿ ಹಲವಾರು ಕ್ಷೇತ್ರಗಳ 100ಕ್ಕೂ ಹೆಚ್ಚು ಪ್ರಾಜೆಕ್ಟ್‌ಗಳಲ್ಲಿ ಕೌಶಲ ಅಭಿವೃದ್ಧಿಗೆ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಹೇಳಿದೆ.
ಯುವಜನರಿಗೆ ‘ಪರಿವರ್ತನಾ’ ಎಂಬ ಕಾರ್ಯಕ್ರಮದಡಿ ಮಾರುಕಟ್ಟೆಗೆ ಅನುಗುಣವಾಗಿ ಅಗತ್ಯವಿರುವ ಕೌಶಲ, ಜ್ಞಾನ, ಸಾಮರ್ಥ್ಯ ವೃದ್ಧಿಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದೆ.
ತರಬೇತಿ ಕಾರ್ಯಕ್ರಮದಲ್ಲಿ ಯಶಸ್ವಿಯಾಗಿ ಕಲಿತ ಯುವಜನರಿಗೆ ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮ (ಎನ್‌ಎಸ್‌ಡಿಸಿ), ಅರ್ಹ ಸರ್ಕಾರೇತರ ಏಜೆನ್ಸಿಗಳು ಪ್ರಮಾಣ ಪತ್ರ ನೀಡುತ್ತದೆ ಎಂದು ತಿಳಿಸಿದೆ.
ಜುಲೈ 15ರಂದು ವಿಶ್ವ ಕೌಶಲ ದಿನದ ಅಂಗವಾಗಿ ಬ್ಯಾಂಕ್ ಈ ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.