ADVERTISEMENT

ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ₹16,821 ಕೋಟಿ ಲಾಭ

ಪಿಟಿಐ
Published 19 ಅಕ್ಟೋಬರ್ 2024, 14:23 IST
Last Updated 19 ಅಕ್ಟೋಬರ್ 2024, 14:23 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಖಾಸಗಿ ವಲಯದ ಎಚ್‌ಡಿಎಫ್‌ಸಿ ಬ್ಯಾಂಕ್‌ 2024–25ನೇ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ₹16,821 ಕೋಟಿ ನಿವ್ವಳ ಲಾಭಗಳಿಸಿದೆ. 

ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹15,976 ಕೋಟಿ ಲಾಭಗಳಿಸಿತ್ತು. ಇದಕ್ಕೆ ಹೋಲಿಸಿದರೆ ಲಾಭದ ಪ್ರಮಾಣದಲ್ಲಿ ಶೇ 5ರಷ್ಟು ಏರಿಕೆಯಾಗಿದೆ. ಒಟ್ಟು ₹85,500 ಕೋಟಿ ವರಮಾನಗಳಿಸಲಾಗಿದೆ ಎಂದು ಬ್ಯಾಂಕ್‌, ಶನಿವಾರ ಷೇರುಪೇಟೆಗೆ ತಿಳಿಸಿದೆ.

ಬಡ್ಡಿ ವರಮಾನ ₹74,017 ಕೋಟಿ ಆಗಿದೆ. ನಿವ್ವಳ ಬಡ್ಡಿ ವರಮಾನ ₹30,110 ಕೋಟಿ ಆಗಿದ್ದು, ಕಳೆದ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 10ರಷ್ಟು ಏರಿಕೆಯಾಗಿದೆ.

ADVERTISEMENT

ವಸೂಲಾಗದ ಸಾಲದ ಸರಾಸರಿ ಪ್ರಮಾಣವು ಶೇ 1.34ರಿಂದ ಶೇ 1.36ಕ್ಕೆ ಏರಿಕೆಯಾಗಿದೆ. ನಿವ್ವಳ ಎನ್‌‍ಪಿಎ ಶೇ 0.35ರಿಂದ ಶೇ 0.41ಕ್ಕೆ ಹೆಚ್ಚಳವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.