ADVERTISEMENT

ಸಾಲದ ಬಡ್ಡಿದರ ಹೆಚ್ಚಿಸಿದ ಎಚ್‌ಡಿಎಫ್‌ಸಿ ಬ್ಯಾಂಕ್‌

ಪಿಟಿಐ
Published 7 ನವೆಂಬರ್ 2024, 14:09 IST
Last Updated 7 ನವೆಂಬರ್ 2024, 14:09 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಖಾಸಗಿ ವಲಯದ ಎಚ್‌ಡಿಎಫ್‌ಸಿ ಬ್ಯಾಂಕ್‌ ಗುರುವಾರ ಮಾರ್ಜಿನಲ್‌ ಕಾಸ್ಟ್‌ ಆಫ್‌ ಫಂಡ್ಸ್‌ ಆಧಾರಿತ ಸಾಲದ (ಎಂಸಿಎಲ್‌ಆರ್‌) ಮೇಲಿನ ಬಡ್ಡಿದರವನ್ನು ಶೇ 0.05ರಷ್ಟು ಹೆಚ್ಚಿಸಿದೆ. ಈ ಹೊಸ ಬಡ್ಡಿದರವು ಗುರುವಾರದಿಂದಲೇ ಜಾರಿಗೆ ಬಂದಿದೆ.

ಇದರಿಂದ ವಾಹನಗಳು ಹಾಗೂ ವೈಯಕ್ತಿಕ ಸಾಲಗಳ ಮೇಲಿನ ಇಎಂಐ ಹೆಚ್ಚಳವಾಗಲಿದೆ. ಬಡ್ಡಿದರವು ಶೇ 9.45ಕ್ಕೆ ಹೆಚ್ಚಳವಾಗಿದೆ. 

ತ್ವರಿತಗತಿ ಸಾಲದ ಎಂಸಿಎಲ್‌ಆರ್‌ ಶೇ 9.10ರಿಂದ ಶೇ 9.15ಕ್ಕೆ ಹೆಚ್ಚಳವಾಗಿದೆ. ಒಂದು ತಿಂಗಳ ಎಂಸಿಎಲ್‌ಆರ್‌ ಶೇ 9.20ಕ್ಕೆ ಏರಿಕೆಯಾಗಿದೆ.  

ADVERTISEMENT

ಕಳೆದ ತಿಂಗಳು ನಡೆದ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ ಸಭೆಯು ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಇದರ ಬೆನ್ನಲ್ಲೇ ಎಚ್‌ಡಿಎಫ್‌ಸಿ ಬ್ಯಾಂಕ್‌ ಬಡ್ಡಿದರವನ್ನು ಏರಿಕೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.