ADVERTISEMENT

ಎಚ್‌ಡಿಎಫ್‌ಸಿ ಬ್ಯಾಂಕ್‌ ಸಾಲ ನೀಡಿಕೆ ಏರಿಕೆ

ಪಿಟಿಐ
Published 4 ಅಕ್ಟೋಬರ್ 2024, 13:09 IST
Last Updated 4 ಅಕ್ಟೋಬರ್ 2024, 13:09 IST
ಎಚ್‌ಡಿಎಫ್‌ಸಿ ಬ್ಯಾಂಕ್‌
ಎಚ್‌ಡಿಎಫ್‌ಸಿ ಬ್ಯಾಂಕ್‌   

ನವದೆಹಲಿ: ಖಾಸಗಿ ವಲಯದ ಎಚ್‌ಡಿಎಫ್‌ಸಿ ಬ್ಯಾಂಕ್‌ 2024–25ನೇ ಆರ್ಥಿಕ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಒಟ್ಟು ₹25.19 ಲಕ್ಷ ಕೋಟಿ ಸಾಲ ನೀಡಿದೆ.

2023–24ನೇ ಆರ್ಥಿಕ ವರ್ಷದ ಇದೇ ತ್ರೈಮಾಸಿಕದಲ್ಲಿ ₹23.54 ಲಕ್ಷ ಕೋಟಿ ಸಾಲ ನೀಡಿತ್ತು. ಇದಕ್ಕೆ ಹೋಲಿಸಿದರೆ ಶೇ 7ರಷ್ಟು ಏರಿಕೆಯಾಗಿದೆ ಎಂದು ಬ್ಯಾಂಕ್‌ ಶುಕ್ರವಾರ ಷೇರುಪೇಟೆಗೆ ತಿಳಿಸಿದೆ.

ಬ್ಯಾಂಕ್‌ನ ಠೇವಣಿಯಲ್ಲಿ ಶೇ 15ರಷ್ಟು ಏರಿಕೆಯಾಗಿದ್ದು, ₹23.53 ಲಕ್ಷ ಕೋಟಿ ಸಂಗ್ರಹವಾಗಿದೆ. ಗ್ರಾಹಕರಿಂದ ಠೇವಣಿ ಸಂಗ್ರಹಿಸುವ ಬ್ಯಾಂಕ್‌ಗಳ ನಗದು ರಕ್ಷಣೆ ಅನುಪಾತ (ಎಲ್‌ಸಿಆರ್‌) ಶೇ 127ರಷ್ಟಿದೆ ಎಂದು ತಿಳಿಸಿದೆ.

ADVERTISEMENT

ಯುಕೋ ಬ್ಯಾಂಕ್‌: 

ಸರ್ಕಾರಿ ಸ್ವಾಮ್ಯದ ಯುಕೋ ಬ್ಯಾಂಕ್‌ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ₹1.98 ಲಕ್ಷ ಕೋಟಿ ಸಾಲ ನೀಡಿದೆ(ಶೇ 18ರಷ್ಟು ಏರಿಕೆ). ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹1.67 ಲಕ್ಷ ಕೋಟಿ ಸಾಲ ನೀಡಿತ್ತು.

₹2.99 ಲಕ್ಷ ಕೋಟಿ ಠೇವಣಿ ಸಂಗ್ರಹವಾಗಿದೆ (ಶೇ 10ರಷ್ಟು ಏರಿಕೆ) ಎಂದು ಬ್ಯಾಂಕ್‌ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.