ನವದೆಹಲಿ: ಎಚ್‌ಡಿಎಫ್‌ಸಿ ಬ್ಯಾಂಕ್ ಎಂಸಿಎಲ್‌ಆರ್ ಆಧಾರಿತ ಸಾಲದ ಮೇಲಿನ ಬಡ್ಡಿ ದರವನ್ನು ಕನಿಷ್ಠ ಶೇ 0.5ರಿಂದ ಗರಿಷ್ಠ ಶೇಕಡ 0.15ರವರೆಗೆ ಹೆಚ್ಚಿಸಿದೆ. ಇದರ ಪರಿಣಾಮವಾಗಿ ವಾಹನ ಹಾಗೂ ವೈಯಕ್ತಿಕ ಸಾಲಗಳು ತುಸು ದುಬಾರಿ ಆಗಲಿವೆ.
ಆಯ್ದ ಕೆಲವು ಅವಧಿಯ ಸಾಲಗಳ ಮೇಲಿನ ಎಂಸಿಎಲ್‌ಆರ್ ಆಧಾರಿತ ಬಡ್ಡಿ ದರವನ್ನು ಹೆಚ್ಚಿಸಲಾಗಿದೆ. ರೆಪೊ ದರಕ್ಕೆ ಹೊಂದಿಕೊಂಡಿರುವ ಸಾಲಗಳ ಮೇಲಿನ ಬಡ್ಡಿ ದರದಲ್ಲಿ ಇದರಿಂದ ವ್ಯತ್ಯಾಸ ಆಗುವುದಿಲ್ಲ.
ಗೃಹ ಸಾಲಗಳು ಎಂಸಿಎಲ್‌ಆರ್‌ಗೆ ಜೋಡಣೆ ಆಗಿರುವುದಿಲ್ಲ. ಹೀಗಾಗಿ, ಬ್ಯಾಂಕ್‌ನ ಈ ತೀರ್ಮಾನದಿಂದಾಗಿ ಗೃಹ ಸಾಲ ಪಡೆದವರ ಮೇಲೆ ಯಾವುದೇ ಪರಿಣಾಮ ಉಂಟಾಗದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.