ADVERTISEMENT

50 ಸಾವಿರ ಚಾರ್ಜಿಂಗ್‌ ಕೇಂದ್ರ: ಬೋಲ್ಟ್‌ ಜೊತೆ ಹೀರೊ ಎಲೆಕ್ಟ್ರಿಕ್‌ ಒಪ್ಪಂದ

ಪಿಟಿಐ
Published 20 ಏಪ್ರಿಲ್ 2022, 10:22 IST
Last Updated 20 ಏಪ್ರಿಲ್ 2022, 10:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಲ್ಲಿ ಮುಂದಿನ ಒಂದು ವರ್ಷದಲ್ಲಿ 50 ಸಾವಿರ ಚಾರ್ಜಿಂಗ್‌ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಿದ್ದು, ಇದಕ್ಕಾಗಿ ಚಾರ್ಜಿಂಗ್‌ ಮೂಲಸೌಕರ್ಯ ಒದಗಿಸುವ ಬೋಲ್ಟ್‌ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೀರೊ ಎಲೆಕ್ಟ್ರಿಕ್‌ ಕಂಪನಿ ಬುಧವಾರ ತಿಳಿಸಿದೆ.

ಈ ಒಪ್ಪಂದದಿಂದಾಗಿ, ದೇಶದಾದ್ಯಂತ ಇರುವ ಹೀರೊ ಎಲೆಕ್ಟ್ರಿಕ್‌ನ 750ಕ್ಕೂ ಅಧಿಕ ಟಚ್‌ ಪಾಯಿಂಟ್‌ಗಳಲ್ಲಿ ಬೋಲ್ಟ್‌ ಕಂಪನಿ ಚಾರ್ಜರ್‌ಗಳನ್ನು ಅಳವಡಿಸಲಾಗುತ್ತದೆ. 4.5 ಲಕ್ಷಕ್ಕೂ ಅಧಿಕ ಗ್ರಾಹಕರಿಗೆ ಇದರಿಂದ ಅನುಕೂಲ ಆಗಲಿದೆ. ಅಲ್ಲದೆ ಹೀರೊ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ಹೊಂದಿರುವ 2 ಸಾವಿರ ಸವಾರರಿಗೆ ಬೋಲ್ಟ್‌ ಕಂಪನಿಯು ಉಚಿತವಾಗಿ ಚಾರ್ಜಿಂಗ್‌ ಯುನಿಟ್‌ ನೀಡಲಿದ್ದು, ಅದನ್ನು ಅವರ ಮನೆಯಲ್ಲಿ ಅಳವಡಿಸಲಾಗುತ್ತದೆ ಎಂದು ಕಂಪನಿಯು ಹೇಳಿದೆ.

ವಿದ್ಯುತ್ ಚಾಲಿತ ವಾಹನಗಳ ಬಳಕೆ ಹೆಚ್ಚಿಸುವ ಉದ್ದೇಶದಿಂದ ದೇಶದಲ್ಲಿ ಚಾರ್ಜಿಂಗ್‌ ಮೂಲಸೌಕರ್ಯ ಬಲಪಡಿಸಲು ನಿರ್ಧರಿಸಲಾಗಿದೆ. ಈ ಗುರಿ ಸಾಧನೆಗೆ ಪಾಲುದಾರಿಕೆಯು ನೆರವಾಗುವ ವಿಶ್ವಾಸವಿದೆ ಎಂದು ಹೀರೊ ಎಲೆಕ್ಟ್ರಿಕ್‌ನ ಸಿಇಒ ಸೋಹಿಂದರ್‌ ಗಿಲ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.