ನವದೆಹಲಿ: ಹೀರೊ ಮೊಟೊಕಾರ್ಪ್ ಕಂಪನಿಯು ಜುಲೈ 1ರಿಂದ ಜಾರಿಗೆ ಬರುವಂತೆ ತನ್ನ ಎಲ್ಲ ಬೈಕ್ ಮತ್ತು ಸ್ಕೂಟರ್‌ಗಳ ಬೆಲೆಯನ್ನು ₹ 3 ಸಾವಿರದವರೆಗೆ ಹೆಚ್ಚಿಸುವುದಾಗಿ ಗುರುವಾರ ತಿಳಿಸಿದೆ.
ನಿರ್ದಿಷ್ಟ ಮಾದರಿ ಮತ್ತು ಮಾರುಕಟ್ಟೆಗೆ ಅನುಗುಣವಾಗಿ ಬೆಲೆಯು ಹೆಚ್ಚಾಗಲಿದೆ ಎಂದು ಕಂಪನಿಯು ಷೇರುಪೇಟೆಗೆ ತಿಳಿಸಿದೆ.
ಸರಕುಗಳ ದರ ಸೇರಿದಂತೆ ಒಟ್ಟಾರೆ ವೆಚ್ಚವು ಹೆಚ್ಚಾಗುತ್ತಿರುವುದರಿಂದ ಅದನ್ನು ಭಾಗಶಃ ಸರಿದೂಗಿಸಲು ಬೆಲೆ ಏರಿಕೆ ಅನಿವಾರ್ಯ ಎಂದು ಕಂಪನಿ ತಿಳಿಸಿದೆ.
ಕಂಪನಿಯು ₹ 51,450ರಿಂದ ₹ 1.32 ಲಕ್ಷದವರೆಗಿನ ಬೆಲೆಯ (ಎಕ್ಸ್ ಷೋರೂಂ) ವಿವಿಧ ಮಾದರಿಯ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.