ADVERTISEMENT

ಕನ್ನಡಿಗರಿಗೆ ಮೀಸಲಾತಿ | ಕೌಶಲ ಹುದ್ದೆಗಳಿಗೆ ವಿನಾಯಿತಿ ನೀಡಿ: ಕಿರಣ್‌ ಮಜುಂದಾರ್‌

ಪಿಟಿಐ
Published 17 ಜುಲೈ 2024, 15:23 IST
Last Updated 17 ಜುಲೈ 2024, 15:23 IST
<div class="paragraphs"><p>ಕಿರಣ್‌ ಮಜುಂದಾರ್‌ ಶಾ</p></div>

ಕಿರಣ್‌ ಮಜುಂದಾರ್‌ ಶಾ

   

ನವದೆಹಲಿ: ಖಾಸಗಿ ಕಂಪನಿಗಳ ಹುದ್ದೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವ ಕರ್ನಾಟಕ ರಾಜ್ಯ ಸರ್ಕಾರದ ಎರಡು ಮಸೂದೆಗಳಲ್ಲಿ ಹೆಚ್ಚು ಕೌಶಲ ಬಯಸುವ ಹುದ್ದೆಗಳಿಗೆ ವಿನಾಯಿತಿ ನೀಡಬೇಕಿದೆ ಎಂದು ಜೈವಿಕ ತಂತ್ರಜ್ಞಾನ ಕಂಪನಿ ಬಯೊಕಾನ್‌ ಅಧ್ಯಕ್ಷೆ ಕಿರಣ್‌ ಮಜುಂದಾರ್‌ ಶಾ ಒತ್ತಾಯಿಸಿದ್ದಾರೆ.

‘ಸಿ’ ಮತ್ತು ‘ಡಿ’ ದರ್ಜೆಯ ಹುದ್ದೆಗಳನ್ನು ಸ್ಥಳೀಯರಿಗೆ ಮೀಸಲಿಡಬೇಕು ಎಂದು ಸರ್ಕಾರ ಹೇಳಿದೆ. ಈ ಕುರಿತು ಮಂಡಿಸಲಿರುವ ಮಸೂದೆಗಳು ತಂತ್ರಜ್ಞಾನ ವಲಯದ ಪ್ರಮುಖ ಹುದ್ದೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಬುಧವಾರ ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ADVERTISEMENT

‘ಟೆಕ್‌ ವಲಯಕ್ಕೆ ಹೆಚ್ಚು ಕೌಶಲ ಹೊಂದಿರುವ ಉದ್ಯೋಗಿಗಳ ಅವಶ್ಯಕತೆಯಿದೆ. ಈ ನಡುವೆಯೇ ಸ್ಥಳೀಯರಿಗೆ ಉದ್ಯೋಗ ನೀಡುವ ಗುರಿಯಿದೆ. ಸರ್ಕಾರದ ಕ್ರಮವು ತಂತ್ರಜ್ಞಾನದಲ್ಲಿನ ನಮ್ಮ ಪ್ರಮುಖ ಸ್ಥಾನದ ಮೇಲೆ ಪರಿಣಾಮ ಬೀರಬಾರದು’ ಎಂದು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.