ADVERTISEMENT

2 ತಿಂಗಳ ಮೊದಲೇ ಕ್ಲೈಂಟ್ ಜತೆ ಅದಾನಿ ವರದಿ ಹಂಚಿಕೊಂಡಿದ್ದ ಹಿಂಡೆನ್‌ಬರ್ಗ್: ಸೆಬಿ

ಪಿಟಿಐ
Published 7 ಜುಲೈ 2024, 11:20 IST
Last Updated 7 ಜುಲೈ 2024, 11:20 IST
ಸೆಬಿ
ಸೆಬಿ    

ನವದೆಹಲಿ: ಅಮೆರಿಕ ಮೂಲದ ಶಾರ್ಟ್‌ ಸೆಲ್ಲರ್‌ ಕಂಪನಿ ಹಿಂಡೆನ್‌ಬರ್ಗ್‌ ರಿಸರ್ಚ್‌, ಅದಾನಿ ಸಮೂಹದ ವಿರುದ್ಧ ಗಂಭೀರ ಆರೋಪ ಮಾಡುವುದಕ್ಕೂ 2 ತಿಂಗಳ ಮೊದಲೇ ನ್ಯೂಯಾರ್ಕ್ ಮೂಲದ ಹೆಡ್ಜ್ ಫಂಡ್ ಮ್ಯಾನೇಜರ್ ಮಾರ್ಕ್ ಕಿಂಗ್‌ಡನ್ ಅವರೊಂದಿಗೆ ಮುಂಗಡ ಪ್ರತಿಯನ್ನು ಹಂಚಿಕೊಂಡಿದೆ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ತಿಳಿಸಿದೆ.

ಲಾಭದ ಆಸೆಯಿಂದ ಅದಾನಿ ಸಮೂಹಕ್ಕೆ ಸೇರಿ‌ದ ಸಂಘಟಿತ ಷೇರನ್ನು ಮಾರಾಟಕ್ಕಿಡುವಲ್ಲಿಯೂ ನಿಯಮಾವಳಿ ಉಲ್ಲಂಘಿಸಲಾಗಿದೆ ಎಂದು ಸೆಬಿ ಆರೋಪಿಸಿದೆ.

ಈಚೆಗೆ ಹಿಂಡೆನ್‌ಬರ್ಗ್‌ ರಿಸರ್ಚ್‌ಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು ಷೋಕಾಸ್‌ ನೋಟಿಸ್‌ ನೀಡಿತ್ತು.

ADVERTISEMENT

ಷೇರುಪೇಟೆಯ ವಾಸ್ತವಿಕ ಬೆಲೆಗಿಂತ ಕೃತಕ ಬೆಲೆಯಲ್ಲಿ ಅದಾನಿ ಸಮೂಹದ ಷೇರುಗಳು ಮಾರಾಟವಾಗುತ್ತಿವೆ ಎಂದು 2023ರ ಜನವರಿಯಲ್ಲಿ ಹಿಂಡೆನ್‌ಬರ್ಗ್‌ ವರದಿ ಪ್ರಕಟಿಸಿತ್ತು. ಈ ವರದಿಯಲ್ಲಿ ಉದ್ದೇಶಪೂರ್ವಕವಾಗಿ ವಾಸ್ತವಾಂಶಗಳನ್ನು ತಿರುಚಲಾಗಿದೆ ಎಂದು ಸೆಬಿ ನೀಡಿರುವ ನೋಟಿಸ್‌ನಲ್ಲಿ ಹೇಳಲಾಗಿತ್ತು.

ಜೂನ್‌ 26ರಂದು ಇ–ಮೇಲ್‌ ಮೂಲಕ ಹಿಂಡೆನ್‌ಬರ್ಗ್‌ಗೆ 46 ಪುಟಗಳ ನೋಟಿಸ್‌ ನೀಡಿದ್ದು, 21 ದಿನದ ಒಳಗೆ ಉತ್ತರಿಸುವಂತೆ ಸೂಚಿಸಲಾಗಿದೆ.

ಯಾವುದೇ ಕಂಪನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಕ್ಕೂ ಪೂರ್ವಭಾವಿಯಾಗಿ ಸೆಬಿ ಷೋಕಾಸ್‌ ನೋಟಿಸ್ ನೀಡುತ್ತದೆ. ಬಳಿಕ ಅಂತಹ ಕಂಪನಿಗೆ ದಂಡ ವಿಧಿಸುವುದು ಮತ್ತು ಭಾರತದ ಷೇರು ಮಾರುಕಟ್ಟೆಯಲ್ಲಿ ಭಾಗವಹಿಸದಂತೆ ನಿರ್ಬಂಧ ಹೇರುವ ಸಾಧ್ಯತೆ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.