ADVERTISEMENT

ಜಾಗತಿಕ ಬಿಕ್ಕಟ್ಟು: ಐ.ಟಿ ನೇಮಕಕ್ಕೆ ಗ್ರಹಣ, ಹೊಸಬರಿಗೆ ಕೆಲಸ ಸಿಗದ ಸ್ಥಿತಿ

ಕ್ಯಾಂಪಸ್‌ನಿಂದ ನೇಮಕಾತಿಗೆ ಹಿಂದೇಟು

ಪಿಟಿಐ
Published 15 ಅಕ್ಟೋಬರ್ 2023, 15:40 IST
Last Updated 15 ಅಕ್ಟೋಬರ್ 2023, 15:40 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಜಾಗತಿಕ ಬಿಕ್ಕಟ್ಟುಗಳು ಮತ್ತು ಗ್ರಾಹಕರು ‘ವಿವೇಚನಾ ವೆಚ್ಚ’ವನ್ನು ಕಡಿತ ಮಾಡುವ ಸಾಧ್ಯತೆ ಇರುವುದರಿಂದ ಮಾಹಿತಿ ತಂತ್ರಜ್ಞಾನ (ಐ.ಟಿ) ಉದ್ಯಮವು ಹೊಸ ನೇಮಕಾತಿ ಮಾಡಿಕೊಳ್ಳದಿರಬಹುದು. ಇನ್ಫೊಸಿಸ್‌ ಮತ್ತು ಎಚ್‌ಸಿಎಲ್‌ ಟೆಕ್‌ ನೇಮಕಾತಿ ಮಾಡದಿರುವ ಸೂಚನೆಯನ್ನು ಈಗಾಗಲೇ ನೀಡಿವೆ. ಹೀಗಾಗಿ ಹೊಸಬರಿಗೆ ಸದ್ಯದ ಮಟ್ಟಿಗೆ ಕೆಲಸ ಸಿಗುವುದು ಕಷ್ಟವಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. 

ಎರಡನೇ ತ್ರೈಮಾಸಿಕದ ಆರಂಭದ ವಾರದಲ್ಲಿ, ಉದ್ಯೋಗಿಗಳ ಸಂಖ್ಯೆಯಲ್ಲಿ ಕಡಿಮೆ ಆಗಿರುವುದಾಗಿ ಐ.ಟಿ ಉದ್ಯಮದ ಬೃಹತ್‌ ಸಂಸ್ಥೆಗಳಾದ ಟಿಸಿಎಸ್‌, ಇನ್ಫೊಸಿಸ್‌ ಮತ್ತು ಎಚ್‌ಸಿಎಲ್‌ ಟೆಕ್ನಾಲಜೀಸ್‌ ಹೇಳಿವೆ. ಉದ್ಯೋಗಿಗಳ ಸಂಖ್ಯೆಯಲ್ಲಿ ಒಟ್ಟು 15,800 ಕಡಿತ ಆಗಿದೆ. ಪ್ರಮುಖ ಕಂಪನಿಗಳ ವರಮಾನವು ಎರಡನೇ ತ್ರೈಮಾಸಿಕದಲ್ಲಿ ನಿರೀಕ್ಷೆಯ ಮಟ್ಟ ಮುಟ್ಟಿಲ್ಲ.

ADVERTISEMENT

ಹಿನ್ನಡೆಗೆ ಕಾರಣಗಳು?: ಹಣದುಬ್ಬರ ಮತ್ತು ಬಡ್ಡಿದರ ಏರಿಕೆ, ಕಡಿಮೆಯಾದ ಹೂಡಿಕೆ, ಭೌಗೋಳಿಕ ಮತ್ತು ರಾಜಕೀಯ ಸಂಘರ್ಷಗಳಿಂದಾಗಿ ಅಭಿವೃದ್ಧಿಗೆ ಹೊಡೆತ ಬಿದ್ದಿದೆ. ಗ್ರಾಹಕರು ಹೊಸ ಯೋಜನೆಗಳನ್ನು ಮುಂದೂಡುತ್ತಿದ್ದಾರೆ, ನಿರ್ಣಾಯಕ ಅಲ್ಲದ ವೆಚ್ಚಗಳನ್ನು ಕಡಿಮೆ ಮಾಡುತ್ತಿದ್ದಾರೆ ಮತ್ತು ಇರುವ ಸೌಲಭ್ಯಗಳ ಗರಿಷ್ಠ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಐ.ಟಿ ಕಂಪನಿಗಳು ಹೇಳಿವೆ. 

ಈ ವರ್ಷ ಕ್ಯಾಂಪಸ್ ನೇಮಕವು ಇನ್ನೂ ಶೇ 10ರಿಂದ ಶೇ 15ರಷ್ಟು ಕಡಿಮೆಯಾಗಬಹುದು ಎಂದು ಎನ್‌ಎಲ್‌ಬಿ ಸರ್ವಿಸಸ್‌ನ ಸಿಇಒ ಸಚಿನ್‌ ಅಲುಗ್‌ ಹೇಳಿದ್ದಾರೆ. 

ಅಕ್ಟೋಬರ್‌ ಮೊದಲ ವಾರದ ಮಾಹಿತಿಯ ಪ್ರಕಾರ, ಕ್ಯಾಂಪಸ್‌ ನೇಮಕಾತಿಯಲ್ಲಿ ಕೆಲಸ ಪಡೆದುಕೊಂಡ ವಿದ್ಯಾರ್ಥಿಗಳ ಪ್ರಮಾಣವು ಕಳೆದ ಅಕ್ಟೋಬರ್‌ಗೆ ಹೋಲಿಸಿದರೆ ಶೇ 20ರಷ್ಟು ಕಡಿಮೆ ಆಗಿತ್ತು ಎಂದು ಸಚಿನ್‌ ವಿವರಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.