ನವದೆಹಲಿ: ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಸ್ಥಳಗಳಲ್ಲಿ ಕಾಫಿ ವೆಂಡಿಂಗ್ ಯಂತ್ರಗಳನ್ನು ಇರಿಸಲು ಸಿದ್ಧಪಡಿಸಿದ್ದ ಅಂದಾಜು ಮೂವತ್ತು ಸಾವಿರ ಅಲಮಾರುಗಳನ್ನು (cabinet) ಬಳಕೆಯಿಂದ ಕೈಬಿಡಲಾಗಿದೆ ಎಂದು ಕಾಫಿ ಡೇ ಗ್ಲೋಬಲ್ ಲಿಮಿಟೆಡ್ ಹೇಳಿದೆ. 2020–21ರಲ್ಲಿ ಹಲವು ಕಂಪನಿಗಳ ನೌಕರರು ಮನೆಯಿಂದಲೇ ಕೆಲಸ ಮಾಡಿದ್ದರಿಂದಾಗಿ, ಪ್ರಯಾಣದ ಮೇಲೆ ನಿರ್ಬಂಧಗಳು ಇದ್ದ ಕಾರಣ ಕಾಫಿ ಡೇ ಈ ಕ್ರಮ ಕೈಗೊಂಡಿದೆ.
ಸಾಂಕ್ರಾಮಿಕದ ಕಾರಣದಿಂದಾಗಿ ಕಾಫಿ ಡೇ ಗ್ಲೋಬಲ್ ಲಿಮಿಟೆಡ್ ಕಂಪನಿಯು ಕಾಫಿ ವೆಂಡಿಂಗ್ (ಮಾರಾಟ) ಯಂತ್ರಗಳನ್ನು ಹಲವು ಕಡೆಗಳಿಂದ ಹಿಂಪಡೆದಿದೆ. ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಕಂಪನಿಯು ₹ 306 ಕೋಟಿ ನಷ್ಟ ಅನುಭವಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.