ADVERTISEMENT

ಇಟಿಎಫ್‌ನಲ್ಲಿ ಹೆಚ್ಚಿದ ಸಿರಿವಂತರ ಹೂಡಿಕೆ

​ಪ್ರಜಾವಾಣಿ ವಾರ್ತೆ
Published 25 ಮೇ 2023, 0:27 IST
Last Updated 25 ಮೇ 2023, 0:27 IST
REUTERS/ESA ALEXANDER
   REUTERS/ESA ALEXANDER

ನವದೆಹಲಿ: ಸಿರಿವಂತರು (ಎಚ್‌ಎನ್‌ಐ) ಪ್ಯಾಸಿವ್‌ ಫಂಡ್‌ಗಳತ್ತ ಹೆಚ್ಚು ಆಕರ್ಷಿತರಾಗಿದ್ದು, 2022–23ರಲ್ಲಿ ವಿನಿಮಯ ವಹಿವಾಟು ನಿಧಿಗಳಲ್ಲಿ (ಇಟಿಎಫ್‌) ಮಾಡಿರುವ ಹೂಡಿಕೆಯು ಶೇಕಡ 66ರಷ್ಟು ಹೆಚ್ಚಾಗಿದೆ. ಅವರು ಇಟಿಎಫ್‌ಗಳಲ್ಲಿ ಮಾಡಿರುವ ಹೂಡಿಕೆಯು ₹ 34 ಸಾವಿರ ಕೋಟಿಗೆ ತಲುಪಿದೆ.

ಹೂಡಿಕೆ ಮಾಡುವುದು ಸುಲಭ ಆಗಿರುವುದು ಹಾಗೂ ವೆಚ್ಚ ಕಡಿಮೆ ಇರುವ ಕಾರಣಕ್ಕೆ ಆ್ಯಕ್ಟಿವ್‌ ಫಂಡ್‌ಗಳಿಗಿಂತಲೂ (ಉದಾಹರಣೆಗೆ, ಮ್ಯೂಚುವಲ್ ಫಂಡ್) ಪ್ಯಾಸಿವ್‌ ಫಂಡ್‌ಗಳು (ಉದಾಹರಣೆಗೆ ಇಟಿಎಫ್) ಹೆಚ್ಚು ಆಕರ್ಷಣೆ ಗಳಿಸಿವೆ.

ಮೋತಿಲಾಲ್‌ ಓಸ್ವಾಲ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ವರದಿಯಲ್ಲಿ ಈ ಅಂಶ ಇದೆ. ಸಿರಿವಂತರು ಇಟಿಎಫ್‌ಗಳಲ್ಲಿ ಮಾಡಿರುವ ಹೂಡಿಕೆಯು 2021–22ರಲ್ಲಿ ₹20,400 ಕೋಟಿ ಆಗಿತ್ತು.

ADVERTISEMENT

ಮ್ಯೂಚುವಲ್ ಫಂಡ್‌ ಉದ್ಯಮದ ಒಟ್ಟು ನಿರ್ವಹಣಾ ಸಂಪತ್ತು ಮೌಲ್ಯವು 2023ರ ಮಾರ್ಚ್‌ ಅಂತ್ಯಕ್ಕೆ ₹40 ಲಕ್ಷ ಕೋಟಿಗೆ ತಲುಪಿದೆ. ಇದರಲ್ಲಿ ಇಟಿಎಫ್‌ನ (ಚಿನ್ನದ ಇಟಿಎಫ್‌ ಸೇರಿ) ನಿರ್ವಹಣಾ ಸಂಪತ್ತು ಮೌಲ್ಯ ₹5 ಲಕ್ಷ ಕೋಟಿಗೂ ಹೆಚ್ಚಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.