ನವದೆಹಲಿ : ಹೋಂಡಾ ಮೋಟರ್‌ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ (ಎಚ್‌ಎಂಎಸ್‌ಐ) ಬಿಎಸ್–6 ಮಾನದಂಡ ಇರುವ ಆ್ಯಕ್ಟಿವಾ 125 ಸ್ಕೂಟರ್ ಬಿಡುಗಡೆ ಮಾಡಿದೆ.
ಸ್ಕೂಟರ್ ಬಿಡುಗಡೆ ಮಾಡಿ ಮಾತನಾಡಿದ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ, ‘ವಾಯು ಮಾಲಿನ್ಯದಿಂದ ಪರಿಸರ ರಕ್ಷಣೆಯ ನಿಟ್ಟಿನಲ್ಲಿ ಈ ಮಾದರಿಯ ಬಿಡುಗಡೆ ಒಂದು ಪ್ರಮುಖ ಹೆಜ್ಜೆಯಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಈ ಸ್ಕೂಟರ್ ಬಿಡುಗಡೆಯ ಮೂಲಕ ಸುಧಾರಿತ ತಂತ್ರಜ್ಞಾನದ ಅಳವಡಿಕೆಯಲ್ಲಿ ಕಂಪನಿಯು ಉದ್ಯಮದಲ್ಲಿ ಮುನ್ನಡೆ ಸಾಧಿಸಿದೆ’ ಎಂದು ಕಂಪನಿಯ ಅಧ್ಯಕ್ಷ ಮಿನೊರು ಕಟು ಹೇಳಿದ್ದಾರೆ.
125ಸಿಸಿ ಪಿಜಿಎಂ–ಎಫ್‌ಐ ಎಚ್‌ಇಟಿ (ಹೋಂಡಾ ಇಕೊ ಟೆಕ್ನಾಲಜಿ) ಎಂಜಿನ್ ಒಳಗೊಂಡಿದೆ. ಸ್ಟ್ಯಾಂಡರ್ಡ್, ಅಲಾಯ್ ಮತ್ತು ಡಿಲಕ್ಸ್ ಆವೃತ್ತಿಗಳಲ್ಲಿ, ರೆಬೆಲ್ ರೆಡ್ ಮೆಟಾಲಿಕ್, ಮಿಡ್‌ನೈಟ್ ಬ್ಲೂ ಮೆಟಾಲಿಕ್, ಹೆವಿ ಗ್ರೇ ಮೆಟಾಲಿಕ್ ಮತ್ತು ಪರ್ಲ್ ಪ್ರೀಶಿಯಸ್ ವೈಟ್ ಬಣ್ಣಗಳಲ್ಲಿ ಲಭ್ಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.