ಬೆಂಗಳೂರು: ಹೋಂಡಾ ಮೋಟರ್ ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರವೇಟ್ ಲಿಮಿಟೆಡ್, ಜಪಾನ್ ತಂತ್ರಜ್ಞಾನದ ನೆರವಿನಿಂದ ದೇಶೀಯವಾಗಿ ತಯಾರಿಸಿರುವ, ಆಕರ್ಷಕ ನೋಟದ ‘ಹೋಂಡಾ ಸಿಬಿ300ಆರ್’ ಬೈಕ್ ಶೀಘ್ರದಲ್ಲಿಯೇ ಭಾರತದ ರಸ್ತೆಗಳ ಮೇಲೆ ಸಂಚರಿಸಲಿದೆ.
ದೇಶದಾದ್ಯಂತ ಇರುವ ಆಯ್ದ ಹೋಂಡಾ ಡೀಲರ್ ಶಿಪ್‌ಗಳಲ್ಲಿ ₹ 5 ಸಾವಿರಪಾವತಿಸಿ ಬೈಕ್ ಬುಕಿಂಗ್ ಮಾಡಬಹುದಾಗಿದೆ.
‘ನಿಯೊ ಸ್ಪೋರ್ಟ್ಸ್ ಕೆಫೆ’ ಪರಿಕಲ್ಪನೆಯ ವಿನ್ಯಾಸದ ‘ಸಿಬಿ300ಆರ್’ ಬೈಕ್ ಅನ್ನು ಭಾರತದಲ್ಲಿಯೇ ತಯಾರಿಸಲಾಗಿದೆ. ಇದರ ಎಕ್ಸ್‌ಷೋರೂಂ ಬೆಲೆ ₹ 2.5 ಲಕ್ಷಕ್ಕಿಂತ ಕಡಿಮೆ ಇರಲಿದೆ.
‘ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿರುವ ಬೈಕ್, ಸವಾರರಿಗೆ ರೋಚಕ ಅನುಭವ ನೀಡಲಿದೆ. 286 ಸಿಸಿ ಸಾಮರ್ಥ್ಯದ, ಸಿಂಗಲ್ ಸಿಲಿಂಡರ್ ಎಂಜಿನ್ ಬೈಕ್ ವಿಶ್ವದಾದ್ಯಂತ ಸವಾರರ ಮೆಚ್ಚುಗೆಗೆ ಪಾತ್ರವಾಗಿದೆ’ ಎಂದು ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಯದ್ವಿಂದರ್ ಸಿಂಗ್ ಗುಲೇರಿಯಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.