ನವದೆಹಲಿ: ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ಜುಲೈನಲ್ಲಿ ಬಿಡುಗಡೆ ಮಾಡಲಿರುವ ಹೊಸ ಹೋಂಡಾ ಸಿಟಿಯ ಮುಂಗಡ ಬುಕಿಂಗ್ಗೆ ಚಾಲನೆ ನೀಡಿದೆ.
5ನೇ ಪೀಳಿಗೆಯಹೋಂಡಾಸಿಟಿಯನ್ನು ಖರೀದಿಸಲು ಕಂಪನಿಯ ಅಧಿಕೃತ ಜಾಲತಾಣದಲ್ಲಿ ₹ 5 ಸಾವಿರ ಪಾವತಿಸಿ ಕಾಯ್ದಿರಿಸಬಹುದು. ವಿತರಕರ ಬಳಿ ₹ 21 ಸಾವಿರ ಪಾವತಿಸಿಯೂ ಕಾಯ್ದಿರಿಸಬಹುದು.
ಬಿಎಸ್6 ಮಾನದಂಡಕ್ಕೆ ಪೂರಕವಾಗಿ,1.5 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಸಿಗಲಿವೆ.
ಉತ್ತರ ಪ್ರದೇಶದ ಗ್ರೇಟರ್ ನೊಯಿಡಾ ಘಟಕದಲ್ಲಿ ಈ ಕಾರ್ ತಯಾರಾಗುತ್ತಿದೆ. ಕೋವಿಡ್–19 ಪಿಡುಗು ಗಮನದಲ್ಲಿ ಇಟ್ಟುಕೊಂಡು ಸರ್ಕಾರ ನೀಡಿರುವ ಮಾರ್ಗಸೂಚಿಗಳಿಗೆ ಅನುಗುಣವಾಗಿ ಅಗತ್ಯವಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ.
‘ಈ ಹಿಂದಿನ ಪೀಳಿಗೆಯ ಹೋಂಡಾ ಸಿಟಿಗೆ ದೊರೆತಿರುವ ಉತ್ತಮ ಸ್ಪಂದನೆಯು ಇದಕ್ಕೂ ಸಿಗುವ ಭರವಸೆ ಇದೆ’ ಎಂದು ಕಂಪನಿಯ ಹಿರಿಯ ಉಪಾಧ್ಯಕ್ಷ ರಾಜೇಶ್ ಗೋಯಲ್ ತಿಳಿಸಿದ್ದಾರೆ.
20.3ಸಿಎಂ ಟಚ್ಸ್ಕ್ರೀನ್ ಡಿಸ್ಪ್ಲೇ ಆಡಿಯೊ,ಸ್ಮಾರ್ಟ್ಫೋನ್ ಕನೆಕ್ಟಿವಿಟಿ ವಿತ್ ಆಂಡ್ರಾಯ್ಡ್ ಆಟೊ, ಆ್ಯಪಲ್ ಕಾರ್ಪ್ಲೇ ಮತ್ತು ಒನ್ಟಚ್ ಎಲೆಕ್ಟ್ರಿಕ್ ಸನ್ರೂಫ್ ಸೌಲಭ್ಯಗಳಿವೆ.
ವೈಶಿಷ್ಟ್ಯಗಳು
ಪೂರ್ಣ ಪ್ರಮಾಣದ ಎಲ್ಇಡಿ ಹೆಡ್ಲ್ಯಾಂಪ್
ಜೆಡ್ ಆಕಾರದ ಎಲ್ಇಡಿ ಟೇಲ್ ಲ್ಯಾಂಪ್
17.7ಸಿಎಂ ಎಚ್ಡಿ ಫುಲ್ ಕಲರ್ ಟಿಎಫ್ಟಿ ಮೀಟರ್
ಲೇನ್ ವಾಚ್ ಕ್ಯಾಮೆರಾ
ವೆಹಿಕಲ್ ಸ್ಟೆಬಿಲಿಟಿ ಅಸಿಸ್ಟ್ (ವಿಎಸ್ಎ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.