ಬೆಂಗಳೂರು: ಹೋಂಡಾ ಇಂಡಿಯಾ ಪವರ್ ಪ್ರಾಡಕ್ಟ್ಸ್ (ಎಚ್‌ಐಪಿಪಿ)ಕಂಪನಿಯು ಮರೈನ್ ಔಟ್‌ಬೋರ್ಡ್ (ಪವರ್ ಬೋಟ್) ವ್ಯಾಪಾರ ಕ್ಷೇತ್ರವನ್ನು ಪ್ರವೇಶಿಸುವುದಾಗಿ ಬುಧವಾರ ಹೇಳಿದೆ.
6 ಎಚ್‌ಪಿ ಮೋಟರ್ ಬೆಲೆಯು ₹ 1.8 ಲಕ್ಷ ಹಾಗೂ 250 ಎಚ್‌ಪಿ ಬೆಲೆಯು ₹ 23 ಲಕ್ಷ ಇರಲಿದೆ ಎಂದು ಕಂಪನಿ ಹೇಳಿದೆ.
‘ಹೋಂಡಾ 4 ಸ್ಟ್ರೋಕ್ ಮರೈನ್ ಔಟ್‌ಬೋರ್ಡ್ ಮೋಟರ್ ಸರಣಿಗಳನ್ನು ಏಪ್ರಿಲ್‌ನಿಂದ ಬಿಡುಗಡೆ ಮಾಡುವುದಾಗಿ ಹೇಳಿದೆ. ಕಡಲ ರಕ್ಷಣೆಯಲ್ಲಿ ತೊಡಗಿರುವ ಸರ್ಕಾರದ ಹಲವು ಸಂಸ್ಥೆಗಳು, ಕೋಸ್ಟಲ್ ಗಾರ್ಡ್, ಗ್ರಾಹಕರು ಮತ್ತು ಪ್ರವಾಸಿಗರಿಗೆ ಟ್ಯಾಕ್ಸಿ ಬೋಟ್ ಸೇವೆ ನೀಡುವವರು, ವಾಣಿಜ್ಯ ಉದ್ದೇಶದ ಮೀನುಗಾರಿಕೆ ನಡೆಸುವವರನ್ನು ಗಮನದಲ್ಲಿ ಇಟ್ಟುಕೊಂಡು ಈ ಮೋಟರ್‌ಗಳನ್ನು ಬಿಡುಗಡೆ ಮಾಡಲಾಗುತ್ತಿದೆ’ ಎಂದು ಕಂಪನಿಯ ಅಧ್ಯಕ್ಷ ಟಕಹಿರೊ ಉಯೇಡಾ ಹೇಳಿದರು.
ಪ್ರವಾಸ, ಕಡಲ ಸುರಕ್ಷತೆ ಮತ್ತು ಮೀನುಗಾರಿಕೆಗೆ ಬಳಸುವ ಬೋಟ್‌ಗಳು 2 ಸ್ಟ್ರೋಕ್‌ನಿಂದ 4 ಸ್ಟ್ರೋಕ್ ತಂತ್ರಜ್ಞಾನದೆಡೆಗೆ ಸಾಗುತ್ತಿವೆ. ಈ ಅವಕಾಶವನ್ನು ಬಳಸಿಕೊಳ್ಳಲು ಕಂಪನಿಯು ಯೋಜನೆ ರೂಪಿಸಿದೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.