ADVERTISEMENT

ಡ್ರೈವ್‌ಜೀ ಜೊತೆ ಹೋಂಡಾ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2018, 19:30 IST
Last Updated 2 ಸೆಪ್ಟೆಂಬರ್ 2018, 19:30 IST
ಹೋಂಡಾ ಸಂಸ್ಥೆಯ ದಕ್ಷಿಣ ವಿಭಾಗದ ಮುಖ್ಯಸ್ಥ ಯೋಗೇಶ್ ಮಾಥೂರ್ ಮತ್ತು ಮಾರುಕಟ್ಟೆ ವಿಭಾಗದ ಹಿರಿಯ ಉಪಾಧ್ಯಕ್ಷ ಯದುವಿಂದರ್ ಸಿಂಗ್ ಅವರು ಡ್ರೈವ್‌ಜೀ ನೀಡಲಿರುವ ವಾಹನ ಪರಿಚಯಿಸಿದರು.
ಹೋಂಡಾ ಸಂಸ್ಥೆಯ ದಕ್ಷಿಣ ವಿಭಾಗದ ಮುಖ್ಯಸ್ಥ ಯೋಗೇಶ್ ಮಾಥೂರ್ ಮತ್ತು ಮಾರುಕಟ್ಟೆ ವಿಭಾಗದ ಹಿರಿಯ ಉಪಾಧ್ಯಕ್ಷ ಯದುವಿಂದರ್ ಸಿಂಗ್ ಅವರು ಡ್ರೈವ್‌ಜೀ ನೀಡಲಿರುವ ವಾಹನ ಪರಿಚಯಿಸಿದರು.   

ಬೆಂಗಳೂರು: ವಾಹನಗಳನ್ನು ಬಾಡಿಗೆಗೆ ಒದಗಿಸುವ ಡ್ರೈವ್‌ಜೀ ಸಂಸ್ಥೆ ಜೊತೆ ವಾಹನ ತಯಾರಿಕಾ ಸಂಸ್ಥೆ ಹೋಂಡಾ ಮೋಟರ್‌ಸೈಕಲ್‌ ಆ್ಯಂಡ್‌ ಸ್ಕೂಟರ್‌ ಇಂಡಿಯಾ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ.

ಒಪ್ಪಂದದ ಅಂಗವಾಗಿ ಬೆಂಗಳೂರು ಮತ್ತು ಹೈದರಾಬಾದ್‌ ನಗರಗಳಲ್ಲಿನ ಪ್ರಯಾಣಿಕರ ಅನುಕೂಲಕ್ಕಾಗಿ 3 ಸಾವಿರ ಹೋಂಡಾ ಆ್ಯಕ್ಟಿವಾ 5ಜಿ ಮತ್ತು ಕ್ಲಿಕ್‌ ಸ್ಕೂಟರ್‌ಗಳನ್ನು ಒದಗಿಸಲಿದೆ.

‘ಡ್ರೈವ್‌ಜೀ ಸಂಸ್ಥೆ ನಮ್ಮ ವಾಹನಗಳ ಮೇಲೆ ವಿಶ್ವಾಸವಿಟ್ಟಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದುಹೋಂಡಾದ ಹಿರಿಯ ಉಪಾಧ್ಯಕ್ಷ ಯದುವಿಂದರ್ ಸಿಂಗ್ ತಿಳಿಸಿದರು.

ADVERTISEMENT

‘ಭಾರತದಲ್ಲಿ ನಗರೀಕರಣ ಹೆಚ್ಚಾಗುತ್ತಿದೆ. ಆದರೆ ಸಮೂಹ ಸಾರಿಗೆ ಸೌಲಭ್ಯ ಕಡಿಮೆ ಇರುವುದರಿಂದ ಸಂಚಾರ ದಟ್ಟಣೆಗೆ ಕಾರಣವಾಗುತ್ತಿದೆ. ಹೀಗಾಗಿ ದ್ವಿಚಕ್ರ ವಾಹನಗಳನ್ನು ಬಳಸುವುದು ಸೂಕ್ತ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.