ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 2022-23ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದಾರೆ. ಬಜೆಟ್ ಮಂಡನೆಯ ವೇಳೆ ಸುದೀರ್ಘ ಭಾಷಣ ಮಾಡಿರುವ ದಾಖಲೆ ಸಹ ನಿರ್ಮಲಾ ಅವರ ಹೆಸರಿನಲ್ಲಿದೆ.
ಈ ಬಾರಿಯೂ ಕಾಗದ ರಹಿತ ಬಜೆಟ್ ಮಂಡನೆ ಮಾಡುತ್ತಿರುವ ಹಣಕಾಸು ಸಚಿವರ ಭಾಷಣ ಸುಮಾರು 90ರಿಂದ 120 ನಿಮಿಷಗಳ ವರೆಗೂ ಇರಬಹುದಾಗಿದೆ. 2019ರ ಬಜೆಟ್ ಮಂಡನೆಯಲ್ಲಿ ನಿರ್ಮಲಾ ಅವರು 2 ಗಂಟೆ 15 ನಿಮಿಷಗಳ ಸುದೀರ್ಘ ಭಾಷಣ ಮಾಡಿದ್ದರು. ಇದು ಭಾರತದ ಬಜೆಟ್ ಮಂಡನೆಯ ಇತಿಹಾಸದಲ್ಲಿಯೇ ಅತಿ ಉದ್ದನೆಯ ಭಾಷಣವೆಂದು ದಾಖಲಾಗಿದೆ.
2020ರಲ್ಲಿ ಅವರು 162 ನಿಮಿಷಗಳ ಬಜೆಟ್ ಭಾಷಣ ಮಾಡಿದ್ದರು.
ಈ ಸಾಲಿನ ಕೇಂದ್ರ ಬಜೆಟ್ ಅಧಿವೇಶನದ ಮೊದಲ ಭಾಗವು ಫೆಬ್ರುವರಿ 11ರ ವರೆಗೂ ನಡೆಯಲಿದೆ ಹಾಗೂ ಎರಡನೇ ಭಾಗವು ಮಾರ್ಚ್ 14ರಿಂದ ಏಪ್ರಿಲ್ 8ರ ವರೆಗೂ ಸಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.