ನವದೆಹಲಿ: ಭಾರತದಲ್ಲಿ ಕ್ರೋಮ್‌ಬುಕ್ ತಯಾರಿಸುವ ಉದ್ದೇಶದಿಂದ ಗೂಗಲ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಎಚ್‌ಪಿ ಕಂಪನಿಯು ಗುರುವಾರ ತಿಳಿಸಿದೆ. ಇದೇ ಅಕ್ಟೋಬರ್ 2ರಿಂದ ತಯಾರಿಕೆ ಆರಂಭಿಸುವುದಾಗಿ ಕಂಪನಿ ಹೇಳಿದೆ.
ಚೆನ್ನೈ ಬಳಿ ಇರುವ ಫ್ಲೆಕ್ಸ್ ಘಟಕದಲ್ಲಿ ಕ್ರೋಮ್‌ಬುಕ್ ತಯಾರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಈ ಘಟಕದಲ್ಲಿ 2020ರ ಆಗಸ್ಟ್‌ನಿಂದಲೇ ಎಚ್‌ಪಿ ಕಂಪನಿಯು ಲ್ಯಾಪ್‌ಟಾಪ್ ಮತ್ತು ಡೆಸ್ಕ್‌ಟಾಪ್‌ಗಳನ್ನು ತಯಾರಿಸುತ್ತಿದೆ.
‘ಭಾರತದಲ್ಲಿ ತಯಾರಿಕೆ ಆರಂಭಿಸುವುದರಿಂದ ಭಾರತದ ವಿದ್ಯಾರ್ಥಿಗಳು ಸುಲಭವಾಗಿ ಪರ್ಸನಲ್ ಕಂಪ್ಯೂಟರ್‌ಗಳನ್ನು ಕೈಗೆಟಕುವ ಬೆಲೆಗೆ ಪಡೆಯುವಂತಾಗಲಿದೆ’ ಎಂದು ಎಚ್‌ಪಿ ಇಂಡಿಯಾದ ಪರ್ಸನಲ್ ಸಿಸ್ಟಮ್ಸ್‌ನ ಹಿರಿಯ ನಿರ್ದೇಶಕ ವಿಕ್ರಮ್ ಬೇಡಿ ತಿಳಿಸಿದ್ದಾರೆ.
‘ಭಾರತದಲ್ಲಿ ಶಿಕ್ಷಣವನ್ನು ಡಿಜಿಟಲೀಕರಣಗೊಳಿಸುವ ಕೆಲಸಕ್ಕೆ ನೀಡುತ್ತಿರುವ ಬೆಂಬಲವನ್ನು ಮುಂದುವರಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇದಾಗಿದೆ’ ಎಂದು ಗೂಗಲ್‌ನ ದಕ್ಷಿಣ ಏಷ್ಯಾದ ಶಿಕ್ಷಣ ವಿಭಾಗದ ಮುಖ್ಯಸ್ಥ ಬಾನಿ ಧವನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.