ಬೆಂಗಳೂರು: ಹುರೂನ್ ಇಂಡಿಯಾ ಸಿದ್ಧಪಡಿಸುವ ‘ಐಐಎಫ್ಎಲ್ ವೆಲ್ತ್ ಹುರೂನ್ ಇಂಡಿಯಾ ರಿಚ್ ಲಿಸ್ಟ್ – 2021’ ಗುರುವಾರ ಬಿಡುಗಡೆ ಆಗಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ (ಆರ್ಐಎಲ್) ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಅದಾನಿ ಸಮೂಹದ ಒಡೆಯ ಗೌತಮ್ ಅದಾನಿ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಅವರು ಒಂದು ವರ್ಷದಲ್ಲಿ ₹1,002 ಕೋಟಿ ಸಂಪತ್ತು ವೃದ್ಧಿಸಿಕೊಳ್ಳುವ ಮೂಲಕ ಒಟ್ಟು ಸಂಪತ್ತು ಮೌಲ್ಯ ₹5.05 ಲಕ್ಷ ಕೋಟಿ ದಾಟಿದೆ. ಮುಕೇಶ್ ಅಂಬಾನಿ ಅವರು ಸತತವಾಗಿ ಹತ್ತು ವರ್ಷಗಳಿಂದ ‘ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ’ ಆಗಿದ್ದಾರೆ ಎಂದು ಹುರೂನ್ ಇಂಡಿಯಾ ಹೇಳಿದೆ. ಮುಕೇಶ್ ಅಂಬಾನಿ ಒಟ್ಟು ಸಂಪತ್ತು ₹ 7.18 ಲಕ್ಷ ಕೋಟಿ ಆಗಿದೆ.
ದೇಶದ ಟಾಪ್ 10 ಸಿರಿವಂತರ ಪಟ್ಟಿ ಇಲ್ಲಿದೆ. ಸೆಪ್ಟೆಂಬರ್ 15ರವರೆಗಿನ ಅಂಕಿ–ಅಂಶಗಳನ್ನು ಆಧರಿಸಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಭಾರತದ 119 ನಗರಗಳಲ್ಲಿ ₹1,000 ಕೋಟಿ ಸಂಪತ್ತಿನ ಒಡೆಯರಾಗಿರುವ 1,007 ವ್ಯಕ್ತಿಗಳನ್ನು ಹುರೂನ್ ಇಂಡಿಯಾ ಗುರುತಿಸಿದೆ.
ಹೆಸರು | ಕಂಪನಿ | ಒಟ್ಟು ಸಂಪತ್ತು | |
1 | ಮುಕೇಶ್ ಅಂಬಾನಿ (64) | ರಿಯಲಯನ್ಸ್ ಇಂಡಸ್ಟ್ರೀಸ್ | ₹ 7.18 ಲಕ್ಷ ಕೋಟಿ |
2 | ಗೌತಮ್ ಅದಾನಿ (59) | ಅದಾನಿ | ₹ 5.05 ಲಕ್ಷ ಕೋಟಿ |
3 | ಶಿವ ನಾಡರ್ (76) | ಎಚ್ಸಿಎಲ್ | ₹ 2.36ಲಕ್ಷ ಕೋಟಿ |
4 | ಎಸ್.ಪಿ.ಹಿಂದುಜಾ (85) | ಹಿಂದುಜಾ | ₹ 2.20ಲಕ್ಷ ಕೋಟಿ |
5 | ಎಲ್.ಎನ್.ಮಿತ್ತಲ್ (71) | ಆರ್ಸೆಲೋರ್ ಮಿತ್ತಲ್ | ₹ 1.74ಲಕ್ಷ ಕೋಟಿ |
6 | ಸೈರಸ್ ಎಸ್ ಪೊನ್ನಾವಾಲಾ (80) | ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ | ₹ 1.63ಲಕ್ಷ ಕೋಟಿ |
7 | ರಾಧಾಕಿಶನ್ ದಮಾನಿ (66) | ಅವೆನ್ಯೂ ಸೂಪರ್ಮಾರ್ಟ್ಸ್ | ₹ 1.54 ಲಕ್ಷ ಕೋಟಿ |
8 | ವಿನೋದ್ ಶಾಂತಿಲಾಲ್ ಅದಾನಿ | ಅದಾನಿ | ₹ 1.31 ಲಕ್ಷ ಕೋಟಿ |
9 | ಕುಮಾರ್ ಮಂಗಳಂ ಬಿರ್ಲಾ (54) | ಆದಿತ್ಯಾ ಬಿರ್ಲಾ | ₹ 1.22 ಲಕ್ಷ ಕೋಟಿ |
10 | ಜಯ್ ಚೌಧರಿ (62) | ಜಿಸ್ಕೇಲರ್ | ₹ 1.21 ಲಕ್ಷ ಕೋಟಿ |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.