ADVERTISEMENT

ಹಟ್ಟಿ ಚಿನ್ನದ ಗಣಿ: ಆಗಸ್ಟ್‌ ತಿಂಗಳಲ್ಲಿ 110 ಕೆ.ಜಿ. ಚಿನ್ನ ಉತ್ಪಾದನೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2023, 14:19 IST
Last Updated 8 ಸೆಪ್ಟೆಂಬರ್ 2023, 14:19 IST
ಹಟ್ಟಿ ಚಿನ್ನದ ಗಣಿ ಕಂಪನಿಯ ಲೋಹ ವಿಭಾಗದಲ್ಲಿ ಕೆಲದಲ್ಲಿ ತೊಡಗಿರುವ ಕಾರ್ಮಿಕರು.
ಹಟ್ಟಿ ಚಿನ್ನದ ಗಣಿ ಕಂಪನಿಯ ಲೋಹ ವಿಭಾಗದಲ್ಲಿ ಕೆಲದಲ್ಲಿ ತೊಡಗಿರುವ ಕಾರ್ಮಿಕರು.   

ಹಟ್ಟಿ ಚಿನ್ನದಗಣಿ (ರಾಯಚೂರು ಜಿಲ್ಲೆ): ಹಟ್ಟಿ ಚಿನ್ನದಗಣಿ ಕಂಪನಿಯು ಆಗಸ್ಟ್‌ ತಿಂಗಳಲ್ಲಿ 48,914 ಮೆಟ್ರಿಕ್ ಟನ್ ಅದಿರು ಸಂಸ್ಕರಿಸಿ 110 ಕೆ.ಜಿ ಚಿನ್ನ ಉತ್ಪಾದಿಸುವ ಮೂಲಕ ದಾಖಲೆ ಮಾಡಿದೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ 1,800 ಕೆ.ಜಿ. ಚಿನ್ನ ಉತ್ಪಾದನೆಯ ಗುರಿ ಹೊಂದಲಾಗಿದೆ. ಆದರೆ, ಐದು ತಿಂಗಳಲ್ಲಿ 501.865 ಕೆ.ಜಿ ಚಿನ್ನ ಉತ್ಪಾದಿಸಲಾಗಿದೆ. ಏಪ್ರಿಲ್ ತಿಂಗಳಲ್ಲಿ 98 ಕೆ.ಜಿ, ಮೇ ತಿಂಗಳಲ್ಲಿ 94 ಕೆ.ಜಿ, ಜೂನ್‌ನಲ್ಲಿ 98 ಕೆ.ಜಿ. ಹಾಗೂ ಜುಲೈನಲ್ಲಿ 99 ಕೆ.ಜಿ ಚಿನ್ನ ಉತ್ಪಾದಿಸಲಾಗಿತ್ತು. ಆಗಸ್ಟ್‌ ತಿಂಗಳಲ್ಲಿ ಈ ಎಲ್ಲ ತಿಂಗಳಲ್ಲಿ ಆಗಿರುವುದಕ್ಕಿಂತ ಹೆಚ್ಚು ಚಿನ್ನವನ್ನು ಉತ್ಪಾದಿಸಲಾಗಿದೆ.

ಸರ್ಕ್ಯುಲರ್ ಶಾಫ್ಟ್: 6 ಮೀಟರ್ ಸುತ್ತಳತೆ ಹಾಗೂ 900 ಮೀಟರ್ ಆಳದ ನ್ಯೂ ಸರ್ಕ್ಯುಲರ್ ಶಾಫ್ಟ್‌ ಕಾಮಗಾರಿ ಮುಗಿದಿದೆ. ಈ ಶಾಫ್ಟ್‌ನ ಕೇಜ್‌ ಮೂಲಕ ಒಂದೇ ಸಮಯಕ್ಕೆ ನೂರು ಕಾರ್ಮಿಕರು ಒಳಗಡೆ ಹೋಗಿ ಬರಲು ಆಗುತ್ತದೆ.

ADVERTISEMENT

‘ಅದಿರು ಸಂಸ್ಕರಣೆಯ ಹೊಸ ಬಾಲ್‌ ಮಿಲ್‌ ಮತ್ತು ಸಾಗ್ ಸಂಸ್ಕರಣೆಗೆ ಸಿದ್ಧವಾಗಿವೆ. ಸದ್ಯ ಇದರ ಪ್ರಯೋಗಾರ್ಥ ಬಳಕೆ ನಡೆಯುತ್ತಿದೆ. ಪ್ರತಿದಿನ 3 ಸಾವಿರ ಮೆಟ್ರಿಕ್ ಟನ್ ಅದಿರು ಸಂಸ್ಕರಿಸುವುದರಿಂದ ಚಿನ್ನ ಉತ್ಪಾದನೆ ಪ್ರಮಾಣ ಹೆಚ್ಚಳವಾಗಲಿದೆ’ ಎಂದು ಹಟ್ಟಿ ಚಿನ್ನದ ಗಣಿ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ ಬಹದ್ದೂರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.