ADVERTISEMENT

ಹುಂಡೈ ಐಪಿಒ ದಾಖಲೆ; ₹27,870 ಕೋಟಿ ಬಂಡವಾಳ ಸಂಗ್ರಹ

ಪಿಟಿಐ
Published 17 ಅಕ್ಟೋಬರ್ 2024, 16:08 IST
Last Updated 17 ಅಕ್ಟೋಬರ್ 2024, 16:08 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಹುಂಡೈ ಮೋಟರ್‌ ಇಂಡಿಯಾ ಕಂಪನಿಯ ಆರಂಭಿಕ ಸಾರ್ವಜನಿಕ ಕೊಡುಗೆಗೆ (ಐಪಿಒ) ಹೂಡಿಕೆದಾರರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಬಿಡ್‌ ಸಲ್ಲಿಕೆಗೆ ಕೊನೆಯ ದಿನವಾದ ಗುರುವಾರ ಕಂಪನಿಯು ನಿರೀಕ್ಷಿಸಿದ್ದ ₹27,870 ಕೋಟಿ ಬಂಡವಾಳ ಸಂಗ್ರಹವಾಗಿದೆ.   

ಒಟ್ಟು 9.97 ಕೋಟಿ ಷೇರುಗಳಿಗೆ ಬಿಡ್‌ ಕರೆಯಲಾಗಿತ್ತು. ಷೇರುಪೇಟೆಯ ಮಾಹಿತಿ ಪ್ರಕಾರ 14 ಕೋಟಿ ಷೇರುಗಳಿಗೆ ಬಿಡ್‌ ಸಲ್ಲಿಕೆಯಾಗಿವೆ. ಕಂಪನಿಯ ಷೇರುಗಳಿಗೆ ಒಟ್ಟಾರೆ 1.41 ಪಟ್ಟು ಬೇಡಿಕೆ ಕಂಡುಬಂದಿದೆ. 

ಅರ್ಹ ಸಾಂಸ್ಥಿಕ ಹೂಡಿಕೆದಾರರ (ಕ್ಯುಐಬಿ) ವಿಭಾಗದಲ್ಲಿ 3.88 ಪಟ್ಟು ಅರ್ಜಿ ಸಲ್ಲಿಕೆಯಾಗಿವೆ. ಚಿಲ್ಲರೆ ವೈಯಕ್ತಿಕ ಹೂಡಿಕೆದಾರರ ವಿಭಾಗದಿಂದ ಶೇ 44ರಷ್ಟು ಬಿಡ್‌ ಸಲ್ಲಿಕೆಯಾಗಿದೆ. ಸಾಂಸ್ಥಿಕೇತರ ಹೂಡಿಕೆದಾರರ ವಿಭಾಗವು ಶೇ 39ರಷ್ಟು ಅರ್ಜಿ ಸ್ವೀಕರಿಸಿದೆ.

ADVERTISEMENT

ಸೋಮವಾರದಂದು ಕಂಪನಿಯು ಆರಂಭಿಕ ಹೂಡಿಕೆದಾರರ‌ (ಆ್ಯಂಕರ್‌ ಇನ್‌ವೆಸ್ಟರ್) ಮೂಲಕ ₹8,315 ಕೋಟಿ ಬಂಡವಾಳ ಸಂಗ್ರಹಿಸಿತ್ತು. 

ಭಾರತೀಯ ಜೀವ ವಿಮಾ ನಿಗಮವು ಐಪಿಒ ಮೂಲಕ ₹21 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಿತ್ತು. ಇದಾದ ಬಳಿಕ ಹುಂಡೈ ಕಂಪನಿಯು ಐಪಿಒ ಮೂಲಕ ಅತಿಹೆಚ್ಚು ಬಂಡವಾಳ ಸಂಗ್ರಹಿಸಿ, ದಾಖಲೆ ಬರೆದಿದೆ. ಪ್ರತಿ ಷೇರಿಗೆ ₹1,865ರಿಂದ ₹1,960 ಬೆಲೆ ನಿಗದಿಪಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.