ADVERTISEMENT

ತೆರಿಗೆ ಕಾನೂನು ಸರಳೀಕರಣಕ್ಕೆ ನಿರ್ಧಾರ: IT ಕಾಯ್ದೆ ಪರಾಮರ್ಶೆ; ಸಲಹೆಗೆ ಆಹ್ವಾನ

ಪಿಟಿಐ
Published 29 ಸೆಪ್ಟೆಂಬರ್ 2024, 14:03 IST
Last Updated 29 ಸೆಪ್ಟೆಂಬರ್ 2024, 14:03 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಕೇಂದ್ರ ಸರ್ಕಾರವು ನೇರ ತೆರಿಗೆ ಕಾನೂನಿನ ಸರಳೀಕರಣಕ್ಕೆ ನಿರ್ಧರಿಸಿದೆ. ಹಾಗಾಗಿ, ಅಕ್ಟೋಬರ್‌ನಿಂದ ಖಾಸಗಿ ವಲಯ ಮತ್ತು ತೆರಿಗೆ ಪರಿಣತರಿಂದ ಸಲಹೆಗಳನ್ನು ಆಹ್ವಾನಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಆರು ದಶಕದಷ್ಟು ಹಳೆಯದಾದ ಆದಾಯ ತೆರಿಗೆ ಕಾಯ್ದೆ 1961ರ ಸಮಗ್ರ ಬದಲಾವಣೆ ಬಗ್ಗೆ 2024–25ನೇ ಸಾಲಿನ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿತ್ತು. ಇದಕ್ಕೆ ಪೂರಕವಾಗಿ ಕೇಂದ್ರ ನೇರ ತೆರಿಗೆಗಳ ಮಂಡಳಿಯು ಕಾಯ್ದೆಯ ಸಮಗ್ರ ಪರಾಮರ್ಶೆಗೆ ಸಂಬಂಧಿಸಿದಂತೆ ಆಂತರಿಕ ಸಮಿತಿಯನ್ನು ರಚಿಸಿದೆ.

ಸರಳ ಭಾಷೆಯಲ್ಲಿ ತೆರಿಗೆದಾರರಿಗೆ ಅರ್ಥವಾಗುವಂತೆ ಕಾಯ್ದೆ ರೂಪಿಸಲು ಸರ್ಕಾರ ಮುಂದಾಗಿದೆ. ವಿವಿಧ ವರ್ಗದ ಜನರಿಂದ ಸಲಹೆ ಸ್ವೀಕರಿಸುವ ಸಂಬಂಧ ಪೋರ್ಟಲ್‌ ರೂಪಿಸಲಿದೆ.

ADVERTISEMENT

‘ಅಕ್ಟೋಬರ್‌ ಮೊದಲ ವಾರದಲ್ಲಿಯೇ ಸಲಹೆಗಳನ್ನು ಸ್ವೀಕರಿಸುವ ಸಾಧ್ಯತೆಯಿದೆ’ ಎಂದು ಮೂಲಗಳು ತಿಳಿಸಿವೆ.

‘ಸರ್ಕಾರವು ಹೊಸ ಕಾಯ್ದೆ ರೂಪಿಸಲು ಮುಂದಾಗುತ್ತಿಲ್ಲ. ಕೆಲವು ತೆರಿಗೆ ಷರತ್ತುಗಳನ್ನು ಬದಲಾಯಿಸುವ ಸಾಧ್ಯತೆಯಿದೆ. 100ಕ್ಕೂ ಹೆಚ್ಚು ಪುಟಗಳನ್ನು ಕಡಿಮೆ ಮಾಡುವ ಸಾಧ್ಯತೆಯಿದೆ. ತೆರಿಗೆ ಸರಳ ಭಾಷೆಯ ಸರಳೀಕರಣದ ಮೂಲಕ ವ್ಯಾಜ್ಯಗಳ ಸಂಖ್ಯೆಯನ್ನು ತಗ್ಗಿಸುವ ಉದ್ದೇಶ ಹೊಂದಿದೆ’ ಎಂದು ಹೇಳಿವೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಜುಲೈನಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ಆರು ತಿಂಗಳೊಳಗೆ ಹೊಸ ಕಾಯ್ದೆ ಜಾರಿಗೊಳಿಸುವ ಬಗ್ಗೆ ಪ್ರಸ್ತಾಪಿಸಿದ್ದರು. ಹಾಗಾಗಿ, ಈ ಪ್ರಕ್ರಿಯೆಯು ಜನವರಿಗೆ ಮುಕ್ತಾಯವಾಗಲಿದೆ. ಬಜೆಟ್‌ ಅಧಿವೇಶನದಲ್ಲಿ ಹೊಸ ಮಸೂದೆ ಮಂಡನೆಯಾಗುವ ಸಾಧ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.