ADVERTISEMENT

PAN Aadhaar Link | ಪ್ಯಾನ್‌–ಆಧಾರ್‌ ಜೋಡಣೆಗೆ ಮೂರೇ ದಿನ ಬಾಕಿ

ಪಿಟಿಐ
Published 29 ಮೇ 2024, 0:20 IST
Last Updated 29 ಮೇ 2024, 0:20 IST
<div class="paragraphs"><p>&nbsp;ಪ್ಯಾನ್‌–ಆಧಾರ್‌ </p></div>

 ಪ್ಯಾನ್‌–ಆಧಾರ್‌

   

ಸಾಂದರ್ಭಿಕ ಚಿತ್ರ

ನವದೆಹಲಿ: ಪ್ಯಾನ್‌ ಕಾರ್ಡ್‌ಗೆ ಆಧಾರ್‌ ಸಂಖ್ಯೆ ಜೋಡಣೆ ಮಾಡದಿರುವ ತೆರಿಗೆದಾರರು ಇದೇ 31ರೊಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿದೆ. ಇಲ್ಲವಾದರೆ ತೆರಿಗೆಯು ದುಪ್ಪಟ್ಟು ಕಡಿತವಾಗಲಿದೆ ಎಂದು ಆದಾಯ ತೆರಿಗೆ ಇಲಾಖೆಯು ಎಚ್ಚರಿಕೆ ನೀಡಿದೆ.

ADVERTISEMENT

ತೆರಿಗೆ ಇಲಾಖೆ‌ಯ ನಿಯಮಾವಳಿಗಳ ಅನ್ವಯ, ಪ್ಯಾನ್‌ಗೆ ಬಯೊಮೆಟ್ರಿಕ್‌ ಆಧಾರ್‌ ಜೋಡಣೆ ಮಾಡದಿದ್ದರೆ ಟಿಡಿಎಸ್‌ ಅನ್ವಯಿಸುವ ದರಕ್ಕಿಂತ ಎರಡು ಪಟ್ಟು ತೆರಿಗೆ ಕಡಿತವಾಗಲಿದೆ.

ನಿಗದಿತ ಗಡುವಿನೊಳಗೆ ಜೋಡಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರೆ ತೆರಿಗೆ ಕಡಿತಗೊಳಿಸುವುದಿಲ್ಲ ಎಂದು ಕಳೆದ ತಿಂಗಳು ಹೊರಡಿಸಿದ್ದ ಸುತ್ತೋಲೆಯಲ್ಲಿ ಇಲಾಖೆಯು ತಿಳಿಸಿತ್ತು. 

ಅಲ್ಲದೆ, ಮೇ 31ರೊಳಗೆ ಹಣಕಾಸು ವ್ಯವಹಾರಗಳ ಹೇಳಿಕೆ (ಎಸ್‌ಎಫ್‌ಟಿ) ಸಲ್ಲಿಸುವಂತೆ ಬ್ಯಾಂಕ್‌ಗಳು, ವಿದೇಶಿ ವಿನಿಮಯ ವಿತರಕರು, ಸರ್ಕಾರೇತರ ಹಣಕಾಸು ಸಂಸ್ಥೆಗಳು, ಬಾಂಡ್ ಮತ್ತು ಡಿಬೆಂಚರ್‌ಗಳ ವಿತರಕರು, ಮ್ಯೂಚುವಲ್‌ ಫಂಡ್‌ ಟ್ರಸ್ಟಿಗಳಿಗೆ ಸೂಚಿಸಿದೆ.   

ಈ ಹಣಕಾಸು ವ್ಯವಹಾರಗಳ ಹೇಳಿಕೆಯಲ್ಲಿ ಇರುವ ದತ್ತಾಂಶಗಳನ್ನು ವಿಶ್ಲೇಷಿಸುವ ಮೂಲಕ ತೆರಿಗೆ ರಿಟರ್ನ್ಸ್ ಸಲ್ಲಿಸದ ವ್ಯಕ್ತಿಗಳ ಬಗ್ಗೆ ಇಲಾಖೆಯು ಮಾಹಿತಿಯನ್ನು ಕಲೆ ಹಾಕುತ್ತದೆ. ಬಳಿಕ ಅಂತಹ ತೆರಿಗೆದಾರರಿಗೆ ಎಸ್‌ಎಂಎಸ್, ಇ-ಮೇಲ್ ಮತ್ತು ಪತ್ರಗಳ ಮೂಲಕ ಮಾಹಿತಿ ರವಾನಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.