ADVERTISEMENT

ತೆರಿಗೆದಾರರಿಗೆ ಹೊಸ ಆ್ಯಪ್

ಪಿಟಿಐ
Published 23 ಮಾರ್ಚ್ 2023, 21:33 IST
Last Updated 23 ಮಾರ್ಚ್ 2023, 21:33 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಆದಾಯ ತೆರಿಗೆ ಇಲಾಖೆಯು ‘AIS for Taxpayers' ಎನ್ನುವ ಮೊಬೈಲ್‌ ಆ್ಯಪ್‌ ಬಿಡುಗಡೆ ಮಾಡಿದೆ. ಟಿಡಿಎಸ್‌/ಟಿಸಿಎಸ್‌, ಬಡ್ಡಿ, ಲಾಭಾಂಶಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಈ ಆ್ಯಪ್‌ ಮೂಲಕ ತೆರಿಗೆ ಪಾವತಿದಾರರು ಪಡೆದುಕೊಳ್ಳಬಹುದು ಎಂದು ಇಲಾಖೆಯು ತಿಳಿಸಿದೆ.

ಆದಾಯ ತೆರಿಗೆ ಇಲಾಖೆಯು ಉಚಿತವಾಗಿ ಈ ಮೊಬೈಲ್‌ ಆ್ಯಪ್‌ ನೀಡಿದ್ದು, ಗೂಗಲ್‌ ಪ್ಲೇ ಮತ್ತು ಆ್ಯಪ್‌ ಸ್ಟೋರ್‌ನಲ್ಲಿ ಲಭ್ಯವಿದೆ.

ಬಳಕೆ ಹೇಗೆ: ಆ್ಯಪ್‌ ಡೌನ್‌ಲೊಡ್‌ ಮಾಡಿಕೊಂಡ ಬಳಿಕ ಪ್ಯಾನ್‌ ಮತ್ತು ಜನ್ಮ ದಿನಾಂಕ ನಮೂದಿಸಬೇಕು. ಮುಂದಿನ ಹಂತದಲ್ಲಿ ಇ–ಫೈಲಿಂಗ್‌ ಪೋರ್ಟಲ್‌ಗೆ ನೀಡಿರುವ ಮೊಬೈಲ್ ಸಂಖ್ಯೆ ಮತ್ತು ಇ–ಮೇಲ್‌ ನೀಡಬೇಕು. ಮೊಬೈಲ್‌ ಮತ್ತು ಇ–ಮೇಲ್‌ಗೆ ಬರುವ ‘ಒಟಿಪಿ’ ಯನ್ನು ನೀಡಿದ ಬಳಿಕ 4 ಸಂಖ್ಯೆಗಳ ಎಂಪಿನ್‌ ನೀಡಿದರೆ ಆ್ಯಪ್‌ ಬಳಕೆಗೆ ಲಭ್ಯವಾಗುತ್ತದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.