ADVERTISEMENT

ಕೊಚ್ಚಾರ್‌ ದಂಪತಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

ಪಿಟಿಐ
Published 8 ಏಪ್ರಿಲ್ 2023, 13:02 IST
Last Updated 8 ಏಪ್ರಿಲ್ 2023, 13:02 IST
ಚಂದಾ ಕೊಚ್ಚಾರ್‌ ಮತ್ತು ದೀಪಕ್‌ ಕೊಚ್ಚಾರ್‌
ಚಂದಾ ಕೊಚ್ಚಾರ್‌ ಮತ್ತು ದೀಪಕ್‌ ಕೊಚ್ಚಾರ್‌   

ನವದೆಹಲಿ: ‘₹3,250 ಕೋಟಿ ಸಾಲ ವಂಚನೆ ಪ್ರಕರಣದ ಆರೋಪಿಗಳಾಗಿರುವ ಐಸಿಐಸಿಐ ಬ್ಯಾಂಕ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಚಂದಾ ಕೊಚ್ಚಾರ್‌, ಅವರ ಪತಿ ದೀಪಕ್‌ ಕೊಚ್ಚಾರ್‌ ಹಾಗೂ ವಿಡಿಯೊಕಾನ್‌ ಸಮೂಹದ ಸಂಸ್ಥಾಪಕ ವೇಣುಗೋಪಾಲ್‌ ಧೂತ್‌ ಅವರ ವಿರುದ್ಧ ಸಿಬಿಐ, ಮುಂಬೈನ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್‌) ಸಲ್ಲಿಸಿದೆ’ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

‘ತನಿಖಾ ಸಂಸ್ಥೆಯು ಐಪಿಸಿ ಸೆಕ್ಷನ್‌ 120–ಬಿ, 409 ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ದೋಷಾರೋಪ ಪಟ್ಟಿ ಸಿದ್ಧಪಡಿಸಿದ್ದು, ಅದರಲ್ಲಿ ಕೆಲ ವ್ಯಕ್ತಿಗಳು ಹಾಗೂ ಕಂಪನಿಗಳನ್ನೂ ಹೆಸರಿಸಿದೆ’ ಎಂದು ಹೇಳಿದ್ದಾರೆ.

‘ಚಂದಾ ಕೊಚ್ಚಾರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಕ್ಕೆ ಐಸಿಐಸಿಐ ಬ್ಯಾಂಕ್‌ನಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಆದರೆ ಬ್ಯಾಂಕ್‌ನ ಅನುಮತಿ ಪಡೆಯದೆಯೇ ದೋಷಾರೋಪ ಪಟ್ಟಿ ಸಲ್ಲಿಸಲು ಸಿಬಿಐ ಮುಂದಾಗಿದೆ. ಅನುಮತಿ ಕೋರಿ ಈಗಾಗಲೇ ಬ್ಯಾಂಕ್‌ಗೆ ಪತ್ರವೊಂದನ್ನು ರವಾನಿಸಲಾಗಿದೆ. ಬ್ಯಾಂಕ್‌ನ ಪ್ರತಿಕ್ರಿಯೆಗಾಗಿ ಸಿಬಿಐ ಎದುರು ನೋಡುತ್ತಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.