ADVERTISEMENT

ಐಸಿಐಸಿಐ ಬ್ಯಾಂಕ್‌ಗೆ ಶೇ 18.5ರಷ್ಟು ಲಾಭ

ಪಿಟಿಐ
Published 27 ಏಪ್ರಿಲ್ 2024, 13:40 IST
Last Updated 27 ಏಪ್ರಿಲ್ 2024, 13:40 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಮುಂಬೈ: ಐಸಿಐಸಿಐ ಬ್ಯಾಂಕ್‌, 2023–24ನೇ ಆರ್ಥಿಕ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ₹11,672 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹9,853 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಲಾಭದಲ್ಲಿ ಶೇ 18.5ರಷ್ಟು ಹೆಚ್ಚಳವಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ. 

ADVERTISEMENT

ಐಸಿಐಸಿಐ ಬ್ಯಾಂಕ್‌, ದೇಶದ ಖಾಸಗಿ ವಲಯದ ಎರಡನೇ ಅತಿದೊಡ್ಡ ಬ್ಯಾಂಕ್‌ ಆಗಿದೆ. ತೆರಿಗೆ ನಂತರದ ಲಾಭದಲ್ಲಿ ಶೇ 17.4ರಷ್ಟು ಏರಿಕೆಯಾಗಿದೆ. ಒಟ್ಟು ₹10,708 ಕೋಟಿ ಲಾಭ ಗಳಿಸಿದೆ. 

ಬಡ್ಡಿ ವರಮಾನದಲ್ಲಿ ಶೇ 8.1ರಷ್ಟು ಹೆಚ್ಚಳವಾಗಿದ್ದು, ₹19,093 ಕೋಟಿ ಆಗಿದೆ. ಬಡ್ಡಿಯೇತರ ವರಮಾನದಲ್ಲಿ ಶೇ 15.7ರಷ್ಟು ಏರಿಕೆಯಾಗಿದ್ದು, ₹5,930 ಕೋಟಿ ಆಗಿದೆ ಎಂದು ಬ್ಯಾಂಕ್ ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.