ನವದೆಹಲಿ (ಪಿಟಿಐ): ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಹೆಚ್ಚುವರಿಯಾಗಿ ಪಡೆದ ಆರೋಪದ ಮೇಲೆ ಬಡ್ಡಿ ಮತ್ತು ದಂಡದೊಂದಿಗೆ ₹2.97 ಕೋಟಿ ಜಿಎಸ್ಟಿ ಪಾವತಿಸುವಂತೆ ಐಡಿಬಿಐ ಬ್ಯಾಂಕ್ಗೆ ತೆರಿಗೆ ಇಲಾಖೆಯು ನೋಟಿಸ್ ನೀಡಿದೆ.
ತೆರಿಗೆ ಇಲಾಖೆಯು 2018-19 ಹಣಕಾಸು ವರ್ಷಕ್ಕೆ ಸಂಬಂಧಿಸಿದ ಜಿಎಸ್ಟಿ ನಿಯಮಗಳ ಅಡಿಯಲ್ಲಿ ಐಟಿಸಿಯ ಹೆಚ್ಚುವರಿ ಲಾಭ ಮತ್ತು ಬಳಕೆಗಾಗಿ ನೋಟಿಸ್ ನೀಡಿದೆ ಎಂದು ಬ್ಯಾಂಕ್ ಷೇರುಪೇಟೆಗೆ ಮಂಗಳವಾರ ತಿಳಿಸಿದೆ.
₹1.42 ಕೋಟಿ ತೆರಿಗೆ, ₹1.41 ಕೋಟಿ ದಂಡ ಮತ್ತು ₹14 ಲಕ್ಷ ಬಡ್ಡಿ ಪಾವತಿಸಲು ಸೂಚಿಸಲಾಗಿದೆ. ಕಾನೂನಿನ ಪ್ರಕಾರ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಐಡಿಬಿಐ ಬ್ಯಾಂಕ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.