ADVERTISEMENT

ಐಡಿಬಿಐ ಬ್ಯಾಂಕ್‌: ಎಫ್‌.ಡಿ ಬಡ್ಡಿದರ ಏರಿಕೆ

ಪಿಟಿಐ
Published 20 ಆಗಸ್ಟ್ 2024, 14:11 IST
Last Updated 20 ಆಗಸ್ಟ್ 2024, 14:11 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಬ್ಯಾಂಕ್‌ಗಳು ಠೇವಣಿ ಸಂಗ್ರಹ ಹೆಚ್ಚಳಕ್ಕೆ ಒತ್ತು ನೀಡಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ ಸೂಚನೆ ನೀಡಿದ ಬೆನ್ನಲ್ಲೇ, ಐಡಿಬಿಐ ಬ್ಯಾಂಕ್‌ ಮಂಗಳವಾರ ನಿಶ್ಚಿತ ಠೇವಣಿ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದೆ.

444 ದಿನಗಳ ಅವಧಿಯ ಠೇವಣಿಯ ಬಡ್ಡಿದರವನ್ನು ಶೇ 7.85ರಷ್ಟು ಹಾಗೂ 375 ದಿನಗಳ ಅವಧಿಯ ಠೇವಣಿ ಮೇಲಿನ ಬಡ್ಡಿದರವನ್ನು ಶೇ 7.75ರಷ್ಟು ಏರಿಕೆ ಮಾಡಲಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ.

‌ವಿಶೇಷ ಅವಧಿಯ ಉತ್ಸವ್‌ ಠೇವಣಿ ಯೋಜನೆಯಡಿ 700 ದಿನಗಳ ಅವಧಿಯ ಠೇವಣಿಗೆ ಶೇ 7.70ರಷ್ಟು ಹಾಗೂ 300 ದಿನಗಳ ಅವಧಿಯ ಠೇವಣಿಗೆ ಶೇ 7.55ರಷ್ಟು ಬಡ್ಡಿದರ ನಿಗದಿಪಡಿಸಲಾಗಿದೆ ಎಂದು ತಿಳಿಸಿದೆ.

ADVERTISEMENT

ಈ ಯೋಜನೆಯಡಿ ಗ್ರಾಹಕರಿಗೆ ಹೆಚ್ಚಿನ ಗಳಿಕೆ ಸಿಗಲಿದೆ. ಸೆಪ್ಟೆಂಬರ್‌ 30ರ ವರೆಗೆ ಈ ಸೌಲಭ್ಯ ಸಿಗಲಿದೆ. ಗ್ರಾಹಕರು ಬ್ಯಾಂಕ್‌ನ ವೆಬ್‌ಸೈಟ್‌, ಮೊಬೈಲ್ ಬ್ಯಾಂಕಿಂಗ್‌ ಅಥವಾ ಹತ್ತಿರದ ಶಾಖೆಗೆ ಭೇಟಿ ನೀಡಿ ಇದರ ಪ್ರಯೋಜನ ಪಡೆಯಬಹುದಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.