ADVERTISEMENT

ಐಡಿಬಿಐ ಬ್ಯಾಂಕ್‌ ಲಾಭ ₹ 324 ಕೋಟಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 18:01 IST
Last Updated 24 ಅಕ್ಟೋಬರ್ 2020, 18:01 IST
ಐಟಿಬಿಐ ಬ್ಯಾಂಕ್‌
ಐಟಿಬಿಐ ಬ್ಯಾಂಕ್‌   

ನವದೆಹಲಿ: ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ₹ 324 ಕೋಟಿ ನಿವ್ವಳ ಲಾಭ ಗಳಿಸಿರುವುದಾಗಿ ಐಡಿಬಿಐ ಬ್ಯಾಂಕ್‌ ತಿಳಿಸಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 3,459 ಕೋಟಿ ನಷ್ಟ ಅನುಭವಿಸಿತ್ತು.

ಹಣಕಾಸು ವರ್ಷದ ಮೊದಲ ತ್ರೈಮಾಸಿದಲ್ಲಿ ಗಳಿಸಿದ್ದ 4 144 ಕೊಟಿ ನಿವ್ವಳ ಲಾಭಕ್ಕೆ ಹೋಲಿಸಿದರೆ ಎರಡನೇ ತ್ರೈಮಾಸಿಕದ ಲಾಭವು ಶೇ 125ರಷ್ಟು ಹೆಚ್ಚಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಒಟ್ಟಾರೆ ವರಮಾನ ₹ 6,231 ಕೋಟಿಗಳಿಂದ ₹ 5,761 ಕೋಟಿಗಳಿಗೆ ಶೇ 7.5ರಷ್ಟು ಇಳಿಕೆಯಾಗಿದೆ.

ಬ್ಯಾಂಕ್‌ನ ನಿವ್ವಳ ಬಡ್ಡಿ ವರಮಾನ ಶೇ 4 ರಷ್ಟು ಹೆಚ್ಚಾಗಿದ್ದು ₹ 1,695 ಕೋಟಿಗಳಷ್ಟಾಗಿದೆ.

ವಸೂಲಾಗದ ಸಾಲದ ಪ್ರಮಾಣ (ಎನ್‌ಪಿಎ) ಶೇ 29.43ರಿಂದ ಶೇ 25.08ಕ್ಕೆ ಇಳಿಕೆಯಾಗಿದೆ. ಅದೇ ರೀತಿ ನಿವ್ವಳ ಎನ್‌ಪಿಎ ಶೇ 5.97 ರಿಂದ ಶೇ 2.67ಕ್ಕೆ ಇಳಿಕೆಯಾಗಿದೆ.

ಭವಿಷ್ಯದಲ್ಲಿ ಎದುರಾಗಬಹುದಾದ ಆಪತ್ತು ಎದುರಿಸಲು ತೆಗೆದಿಡುವ ಮೊತ್ತ ₹ 581 ಕೋಟಿಗಳಷ್ಟಾಗಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 5,641 ಕೋಟಿ ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.