ನವದೆಹಲಿ (ಪಿಟಿಐ): ಭಾರತೀಯ ರೈತರ ರಸಗೊಬ್ಬರ ಸಹಕಾರಿ ಸಂಸ್ಥೆಯು (ಇಫ್ಕೊ) ತಯಾರಿಸುವ ವಿವಿಧ ರಸಗೊಬ್ಬರಗಳ ಬೆಲೆಯನ್ನು ಪ್ರತಿ 50 ಕೆಜಿಯ ಚೀಲಕ್ಕೆ ₹ 50ರಂತೆ ತಗ್ಗಿಸಲಾಗಿದೆ.
ರೈತರು ಕಚ್ಚಾ ಸರಕಿಗೆ ಮಾಡುವ ವೆಚ್ಚ ತಗ್ಗಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿ 50 ಕೆಜಿ ಚೀಲದ ಡಿಎಪಿ ಬೆಲೆಯನ್ನು ₹ 1,300 ರಿಂದ ₹ 1,250ಕ್ಕೆ, ಎನ್‌ಪಿಕೆ–1 (₹ 1,250 ರಿಂದ ₹ 1,200) , ಎನ್‌ಪಿಕೆ–2 (₹ 1,260 ರಿಂದ ₹ 1,210) ಮತ್ತು ಎನ್‌ಪಿ ಬೆಲೆಯನ್ನು ₹ 1,000 ದಿಂದ ₹ 950ಕ್ಕೆ ಇಳಿಸಿದೆ.
ದೇಶದಾದ್ಯಂತ ಇರುವ 35 ಸಾವಿರ ಸಹಕಾರಿ ಸಂಸ್ಥೆಗಳ ಮೂಲಕ 5 ಕೋಟಿ ರೈತರಿಗೆ ‘ಇಫ್ಕೊ’ ತನ್ನ ಸೇವೆ ಸಲ್ಲಿಸುತ್ತಿದೆ. ದೇಶದ ಅತಿದೊಡ್ಡ ರಸಗೊಬ್ಬರ ತಯಾರಿಕಾ ಸಂಸ್ಥೆ ಇದಾಗಿದೆ. 2018–19ರಲ್ಲಿ ₹ 27,852 ಕೋಟಿಗಳ ವಹಿವಾಟು ನಡೆಸಿದೆ.
ಅಂಕಿ ಅಂಶ
35 ಸಾವಿರ: ಸಹಕಾರಿ ಸಂಸ್ಥೆಗಳ ಮೂಲಕ ಸೇವೆ
5 ಕೋಟಿ: ಪ್ರಯೋಜನ ಪಡೆಯುವ ರೈತರ ಸಂಖ್ಯೆ
5; ತಯಾರಿಕಾ ಘಟಕಗಳ ಸಂಖ್ಯೆ
81.49 ಲಕ್ಷ ಟನ್; ರಸಗೊಬ್ಬರ ತಯಾರಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.