ADVERTISEMENT

ಮೇ 1ರಿಂದ ನ್ಯಾನೊ ಯೂರಿಯಾ ಪ್ಲಸ್‌ ರಸಗೊಬ್ಬರ ಲಭ್ಯ

ಪಿಟಿಐ
Published 22 ಏಪ್ರಿಲ್ 2024, 13:46 IST
Last Updated 22 ಏಪ್ರಿಲ್ 2024, 13:46 IST
..........
..........   

ನವದೆಹಲಿ: ಈ ವಾರದಿಂದಲೇ ದ್ರವರೂಪದ ನ್ಯಾನೊ ಯೂರಿಯಾ ಪ್ಲಸ್‌ ತಯಾರಿಕೆ ಆರಂಭವಾಗಲಿದ್ದು, ಮೇ 1ರಿಂದ ಮಾರುಕಟ್ಟೆಯಲ್ಲಿ ಈ ರಸಗೊಬ್ಬರವು ರೈತರಿಗೆ ದೊರೆಯಲಿದೆ ಎಂದು ಇಫ್ಕೊ ಸಂಸ್ಥೆ ತಿಳಿಸಿದೆ.

ದ್ರವರೂಪದ ನ್ಯಾನೊ ಯೂರಿಯಾದಲ್ಲಿ ಶೇ 1ರಿಂದ 5ರಷ್ಟು ಸಾರಜನಕ ಅಂಶವಿದೆ. ಇದರ ಸುಧಾರಿತ ಮಾದರಿಯಾದ ನ್ಯಾನೊ ಯೂರಿಯಾ ಪ್ಲಸ್‌ನಲ್ಲಿ ಶೇ 16ರಷ್ಟು ಸಾರಜನಕ ಅಂಶವಿದೆ. ಇದು ಫಸಲಿಗೆ ನಿರ್ಣಾಯಕ ಹಂತದಲ್ಲಿ ಬೇಕಾದ ಅಗತ್ಯ ಪೋಷಕಾಂಶವನ್ನು ಒದಗಿಸುತ್ತದೆ ಎಂದು ತಿಳಿಸಿದೆ.

ಸಂಸ್ಥೆಯ ಒಡೆತನಕ್ಕೆ ಸೇರಿರುವ ಮೂರು ಘಟಕಗಳಲ್ಲಿ ಉತ್ಪಾದನೆ ಆರಂಭವಾಗಲಿದೆ. ಪ್ರತಿದಿನ 2 ಲಕ್ಷ ಬಾಟಲಿಗಳನ್ನು ತಯಾರಿಸಲಾಗುತ್ತದೆ ಎಂದು ಇಫ್ಕೊದ ಹಿರಿಯ ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ADVERTISEMENT

ಮುಂದಿನ ಮೂರು ವರ್ಷಗಳ ಕಾಲ ಇಫ್ಕೊ ಈ ಗೊಬ್ಬರವನ್ನು ಉತ್ಪಾದಿಸಲಿದೆ ಎಂದು ಈಗಾಗಲೇ ಕೇಂದ್ರ ಸರ್ಕಾರ ಪ್ರಕಟಿಸಿದೆ. 

2021ರಲ್ಲಿ ನ್ಯಾನೊ ಯೂರಿಯಾ ತಯಾರಿಕೆಗೆ ಚಾಲನೆ ನೀಡಲಾಗಿದ್ದು, ಇಲ್ಲಿಯವರೆಗೆ 7.5 ಕೋಟಿ ಬಾಟಲಿಗಳು ಮಾರಾಟವಾಗಿವೆ. 2023ರಲ್ಲಿ ನ್ಯಾನೊ ಡಿಎಪಿ ಉತ್ಪಾದನೆ ಆರಂಭಿಸಲಾಗಿದ್ದು, ಇಲ್ಲಿಯತನಕ 45 ಲಕ್ಷ ಬಾಟಲಿಗಳನ್ನು ಮಾರಾಟ ಮಾಡಲಾಗಿದೆ.

..........

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.