ನವದೆಹಲಿ: ಜಿಎಸ್‌ಟಿ ಇ–ವೇ ಬಿಲ್‌ನೊಂದಿಗೆ ಫಾಸ್ಟ್‌ಟ್ಯಾಗ್ ಅನ್ನು ಜೋಡಿಸುವ ಕುರಿತು ಭಾರತೀಯ ಹೆದ್ದಾರಿ ನಿರ್ವಹಣಾ ಕಂಪನಿ ನಿಯಮಿತ (ಐಎಚ್‌ಎಂಸಿಎಲ್) ಮತ್ತು ಜಿಎಸ್‌ಟಿಎನ್ ಪರಸ್ಪರ ಒಪ್ಪಂದ ಮಾಡಿಕೊಂಡಿವೆ.
ಜಿಎಸ್‌ಟಿ ಮಂಡಳಿಯು ಈಗಾಗಲೇ ಇದಕ್ಕೆ ಔಪಚಾರಿಕ ಸಮ್ಮತಿ ನೀಡಿದೆ. ಇದರಿಂದ ರೆವಿನ್ಯೂ ಇಲಾಖೆಗೆ ವಾಹನಗಳ ಮೇಲೆ ನಿಗಾ ಇಡಲು,
ಇ–ವೇ ಬಿಲ್ ಸೃಷ್ಟಿಸುವಾಗ ನೀಡಿರುವ ವಿಳಾಸಕ್ಕೆ ವಾಹನ ತಲುಪಲಿದೆಯೇ ಎನ್ನುವುದನ್ನೂ ಪತ್ತೆ ಮಾಡಲು ಸುಲಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.