ನವದೆಹಲಿ: ದೇಶದ ಕೈಗಾರಿಕಾ ವಲಯದ ಉತ್ಪಾದನೆಯು ಸೆಪ್ಟೆಂಬರ್‌ನಲ್ಲಿ ಶೇ 3.1ಕ್ಕೆ ಇಳಿಕೆ ಕಂಡಿದೆ. ಆಗಸ್ಟ್‌ನಲ್ಲಿ ಶೇ 12ರಷ್ಟು ಬೆಳವಣಿಗೆ ಕಂಡಿತ್ತು.
ಕೈಗಾರಿಕಾ ಉತ್ಪಾದನೆ ಸೂಚ್ಯಂಕಕ್ಕೆ (ಐಐಪಿ) ಶೇ 7.63ರಷ್ಟು ಕೊಡುಗೆ ನೀಡುವ ತಯಾರಿಕಾ ವಲಯವು ಸೆಪ್ಟೆಂಬರ್‌ನಲ್ಲಿ ಶೇ 2.7ರಷ್ಟು ಬೆಳವಣಿಗೆ ಕಂಡಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ಮಾಹಿತಿ ನೀಡಿದೆ.
ಗಣಿಗಾರಿಕೆ ಮತ್ತು ತಯಾರಿಕಾ ವಲಯಗಳು ಮಾತ್ರವೇ ಸಕಾರಾತ್ಮಕ ಬೆಳವಣಿಗೆ ಕಂಡಿವೆ. ಗಣಿಗಾರಿಕೆ ವಲಯದ ಉತ್ಪಾದನೆಯು ಶೇ 8.6ರಷ್ಟು ಮತ್ತು ವಿದ್ಯುತ್ ವಲಯದ ಉತ್ಪಾದನೆಯು ಶೇ 0.9ರಷ್ಟು ಹೆಚ್ಚಾಗಿದೆ.
ಮೇ ತಿಂಗಳಿನಲ್ಲಿ ಆಗಸ್ಟ್‌ವರೆಗೂ ತಯಾರಿಕಾ ವಲಯದ ಉತ್ಪಾದನೆಯು ಎರಡಂಕಿ ಪ್ರಗತಿ ಕಂಡಿತ್ತು. ವಲಯದ ಉತ್ಪಾದನೆಯು 2020ರ ಸೆಪ್ಟೆಂಬರ್‌ನಲ್ಲಿ ಕೋವಿಡ್‌ಗೂ ಮುಂಚಿನ ಮಟ್ಟವನ್ನು ಮೀರಿತು. 2020ರ ಸೆಪ್ಟೆಂಬರ್‌ನಲ್ಲಿ ಶೇ 1ರಷ್ಟು ಬೆಳವಣಿಗೆ ಕಂಡಿತು.
ಐಐಪಿ ಬೆಳವಣಿಗೆ (%)
ಮೇ;27.6
ಜೂನ್;13.8
ಜುಲೈ;11.5
ಆಗಸ್ಟ್;12
ಸೆಪ್ಟೆಂಬರ್;3.1
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.