ನವದೆಹಲಿ:ದೇಶದಲ್ಲಿಐಎಂಪಿಎಸ್ (ತಕ್ಷಣದ ಪಾವತಿ ಸೇವೆ) ಮೂಲಕ ಹಣ ವರ್ಗಾವಣೆ ಪ್ರಕ್ರಿಯೆ ಹೆಚ್ಚಾಗುತ್ತಿದೆ ಎಂದು ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಮಾಹಿತಿ ನೀಡಿದೆ.
2017–18ರ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ,2018–19ರ ಮೊದಲ ತ್ರೈಮಾಸಿಕದಲ್ಲಿ ಹಣ ವರ್ಗಾವಣೆ ದುಪ್ಪಟ್ಟಾಗಿದೆ.
ಮೊಬೈಲ್, ಇಂಟರ್‌ನೆಟ್, ಎಟಿಎಂ, ಎಸ್‌ಎಂಎಸ್, ಬ್ಯಾಂಕ್ ಶಾಖೆ ಹಾಗೂ ಯುಎಸ್‌ಎಸ್‌ಡಿ (*99*) ಮೂಲಕ ಐಎಂಪಿಎಸ್ ಸೇವೆಯನ್ನು ಪಡೆಯಬಹುದಾಗಿದೆ.
2010ರ ನವೆಂಬರ್‌ನಲ್ಲಿ ಈ ಸೇವೆಗೆ ಚಾಲನೆ ನೀಡಲಾಯಿತು. ಅದಕ್ಕೂ ಮುನ್ನ ಬ್ಯಾಂಕ್ ಕೆಲಸದ ಅವಧಿಯಲ್ಲಿ ಗ್ರಾಹಕರು ಎನ್‌ಇಎಫ್‌ಟಿ ಮತ್ತು ಆರ್‌ಟಿಜಿಎಸ್ ಮೂಲಕ ಹಣ ವರ್ಗಾವಣೆ ಮಾಡಬಹುದಿತ್ತು.
ನೋಟು ರದ್ದತಿ ಬಳಿಕ ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಪಾವತಿ ಸೇವೆಗಳ ಬಳಕೆ ಹೆಚ್ಚಾಗತೊಡಗಿದೆ.
2016ರ ನವೆಂಬರ್‌ನಲ್ಲಿ ಐಎಂಪಿಎಸ್ ಮೂಲಕ ₹ 32,483 ಕೋಟಿಗಳಷ್ಟು ಹಣವರ್ಗಾವಣೆ ಆಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.